alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನಕ್ಕಿಂತ ರಿಕ್ಷಾ ಪ್ರಯಾಣ ದುಬಾರಿ…!

ವಿಮಾನ ಪ್ರಯಾಣಕ್ಕಿಂತ ಆಟೋರಿಕ್ಷಾ ಪ್ರಯಾಣವೇ ಈಗ ದುಬಾರಿಯಾಗಿದೆ. ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ, ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ.

ಅದು ಹೇಗೆ ರಿಕ್ಷಾ ದುಬಾರಿ ಎಂಬುದಕ್ಕೆ ಅವರೊಂದು ಲೆಕ್ಕಾಚಾರವನ್ನೂ ಹೇಳುತ್ತಾರೆ, ನೋಡಿ. ಇಬ್ಬರು ವ್ಯಕ್ತಿಗಳು ಅಟೋರಿಕ್ಷಾದಲ್ಲಿ ಪ್ರಯಾಣಿಸುತ್ತಾರೆ ಎಂದಿಟ್ಟುಕೊಳ್ಳಿ. ಅವರು 10 ರೂ. ದರ ಪಾವತಿಸುತ್ತಾರೆ. ಅಂದರೆ ಕಿ.ಮೀ.ಗೆ. 5 ರೂ. ಶುಲ್ಕ ವಿಧಿಸಲಾಗುತ್ತದೆ. ಆದರೆ ವಿಮಾನದಲ್ಲಿ ಕಿ.ಮೀ.ಗೆ ಕೇವಲ 4 ರೂ. ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಅಂದರೆ ರಿಕ್ಷಾಕ್ಕಿಂತ ವಿಮಾನ ಪ್ರಯಾಣ 1 ರೂ. ಅಗ್ಗವಾದಂತಾಯಿತು. ಹಾಗಾಗಿ ಇಂದು ಹೆಚ್ಚು ಜನರು ವಿಮಾನಯಾನ ಮಾಡುತ್ತಿದ್ದಾರೆ ಎಂದು ನವದೆಹಲಿಯಲ್ಲಿ ಸಚಿವ ಸಿನ್ಹಾ ಹೇಳಿದ್ದಾರೆ.

ಅವರು ಈ ರೀತಿಯ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಫೆಬ್ರವರಿಯಲ್ಲಿ ಇಂದೋರ್‌ನಲ್ಲಿ ಮ್ಯಾನೇಜ್‌ಮೆಂಟ್ ಶೃಂಗದಲ್ಲೂ ಇದೇ ಲಾಜಿಕ್ ಅನ್ನು ಪ್ರಯೋಗಿಸಿದ್ದರು. ನಾಲ್ಕು ವರ್ಷಗಳ ಹಿಂದೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಜನರ ಸಂಖ್ಯೆ 11 ಕೋಟಿ ಆಗಿತ್ತು. ಈ ವರ್ಷ 20 ಕೋಟಿ ತಲುಪುವ ನಿರೀಕ್ಷೆ ಇದೆ. 2013ರಲ್ಲಿ 100 ಮಿಲಿಯನ್ ಪ್ರಯಾಣಿಕ ಟ್ರಿಪ್‌ಗಳಿದ್ದಿದ್ದು, 2017ರ ವೇಳೆಗೆ 200 ಮಿಲಿಯನ್ ಪ್ರಯಾಣಿಕ ಟ್ರಿಪ್‌ಗಳಿಗೇರಿದೆ ಎಂದು ಸಚಿವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...