alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋ ಬಾವಿಗೆ ಬಿದ್ದು 11 ಮಂದಿ ಸಾವು

ಹೈದರಾಬಾದ್: ಆಟೋ ಬಾವಿಗೆ ಬಿದ್ದು 11 ಮಂದಿ ಸಾವನ್ನಪ್ಪಿದ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆ ಮುಫ್ಕಲ್ ನಲ್ಲಿ ನಡೆದಿದೆ.

ಓವರ್ ಲೋಡ್ ಆಗಿದ್ದ ಆಟೋ ಮುಫ್ಕಲ್ ಗ್ರಾಮಕ್ಕೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ತೆರೆದ ಬಾವಿಗೆ ಬಿದ್ದಿದೆ. ಆಟೋದಲ್ಲಿದ್ದ 14 ಮಂದಿಯಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಓವರ್ ಲೋಡ್ ಆಟೋ 11 ಮಂದಿಯ ಜೀವಕ್ಕೆ ಎರವಾಗಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...