alex Certify
ಕನ್ನಡ ದುನಿಯಾ       Mobile App
       

Kannada Duniya

5 ಲಕ್ಷ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಮುಂಬೈನ ಆಟೋ ಡ್ರೈವರ್ ಒಬ್ಬರು ಲಂಡನ್ ಮೂಲದ ಭಾರತೀಯ ದಂಪತಿಯ ಬ್ಯಾಗ್ ಒಂದನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬ್ಯಾಗ್ನಲ್ಲಿದ್ದ ಐದು ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನ ಪೊಲೀಸರ ಸಹಾಯದೊಂದಿಗೆ ವಾಪಸ್ಸು ನೀಡಿದ್ದಾರೆ.

ಆಟೋ ರಿಕ್ಷಾ ಡ್ರೈವರ್ ಆದಂತಾ ಬಿಪಿನ್ ಪಟೇಲ್ ತಮ್ಮ ಆಟೋದಲ್ಲಿ ಬ್ಯಾಗ್ ಒಂದನ್ನ ಗಮನಿಸಿದರು. ಆ ಬ್ಯಾಗ್ ತಮ್ಮ ರಿಕ್ಷಾದಲ್ಲಿ ಪ್ರಯಾಣಿಸಿದ್ದ ದಂಪತಿಗಳದ್ದಿರಬಹುದು ಅಂದುಕೊಂಡರು.

ಕೂಡಲೇ ಅವರು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಆನಂತರ ಸ್ಥಳೀಯ ಕ್ರೈಮ್ ಬ್ರ್ಯಾಂಚ್ ಪೊಲೀಸರು ಬ್ಯಾಗ್ ಕಳೆದುಕೊಂಡಿದ್ದ ಜುಲ್ಫಿಕರ್ ಮತ್ತು ಚೇತನಾ ದಂಪತಿಯನ್ನ ಪತ್ತೆ ಹಚ್ಚಿದ್ದಾರೆ. ಆನಂತರದಲ್ಲಿ ಪೊಲೀಸರ ಸಮ್ಮುಖದಲ್ಲೇ ಬಿಪಿನ್ ಪಟೇಲ್ ಐದು ಲಕ್ಷ ರೂಪಾಯಿ ಮೌಲ್ಯದ ಒಡವೆಗಳಿದ್ದ ಬ್ಯಾಗ್ ದಂಪತಿಗೆ ಹಸ್ತಾಂತರಿಸಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಯನ್ನು ಪೊಲೀಸರು ಮತ್ತು ದಂಪತಿ ಶ್ಲಾಘಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...