alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸ್ಟೆಲ್‌ ವಿದ್ಯಾರ್ಥಿ ರೂಮಿನಲ್ಲಿತ್ತು ಬಳಸಿದ ಕಾಂಡೋಮ್

ಚೆನ್ನೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್‌ನ ಹುಡುಗರ ಹಾಸ್ಟೆಲ್‌ಗೆ ಆಡಳಿತ ಮಂಡಳಿ ಇತ್ತೀಚೆಗೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದೆ.

ಈ ವೇಳೆ ವಿದ್ಯಾರ್ಥಿಯೊಬ್ಬನ ಬಳಿ ಬಳಕೆ ಮಾಡಿದ ಕಾಂಡೋಮ್ ಒಂದು ಪತ್ತೆಯಾಗಿದೆ. ಅಷ್ಟೇ ಅಲ್ಲ, ವಾಟರ್ ಹೀಟರ್, ಎಗ್ ಬಾಯ್ಲರ್, ಎಲೆಕ್ಟ್ರಿಕ್ ಕೆಟ್ಲರ್, ಬೆಂಕಿ ಪೊಟ್ಟಣ, ಸಿಗರೇಟ್ ಇತ್ಯಾದಿ ಹಾಸ್ಟೆಲ್‌ನಲ್ಲಿ ಬಳಕೆ ನಿರ್ಬಂಧಿಸಲಾದ ಅನೇಕ ಸಾಮಗ್ರಿಗಳು ಪತ್ತೆಯಾಗಿವೆ.

ಯಾವ್ಯಾವ ವಿದ್ಯಾರ್ಥಿಯ ರೂಂನಲ್ಲಿ ಏನೇನು ಸಿಕ್ಕಿದೆ ಎಂಬ ವಿವರವನ್ನು ನೋಟಿಸ್ ಬೋರ್ಡ್‌ನಲ್ಲಿ ಆಡಳಿತ ಮಂಡಳಿ ಪಟ್ಟಿ ಮಾಡಿ ಹಾಕಿದೆ. ಅಷ್ಟೇ ಅಲ್ಲ, ನಿಯಮ ಮೀರಿದ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ದಂಡವನ್ನೂ ವಿಧಿಸಿದೆ.

ಈ ಮೂಲಕ ಹಾಸ್ಟೆಲ್ ನಿಯಮ ಉಲ್ಲಂಘಿಸಿದ ವಿದ್ಯಾರ್ಥಿಗಳಿಗೆ ಅವಮಾನ ಮಾಡುವುದು ಆಡಳಿತ ಮಂಡಳಿಯ ಉದ್ದೇಶವಾಗಿತ್ತು. ದಿಢೀರ್ ತಪಾಸಣೆ ಹಾಸ್ಟೆಲ್ ನೀತಿಯ ಭಾಗವಾಗಿದೆ ಎಂದು ಆಡಳಿತ ಮಂಡಳಿ ಹೇಳಿಕೊಂಡಿದೆ.

ಈ ನಡೆಯ ಬಗ್ಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿ ವಿವರ ಬಹಿರಂಗಪಡಿಸುವುದು ನಮ್ಮ ಖಾಸಗಿತನದ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಆಡಳಿತ ಮಂಡಳಿ ನಮ್ಮ ಬಳಿ ನೈತಿk ಪೊಲೀಸ್‌ಗಿರಿ ನಡೆಸಿದೆ ಎಂದು ಹಾಸ್ಟೆಲ್ ಹುಡುಗಿಯರೂ ದೂರಿದ್ದಾರೆ. ತಪಾಸಣೆಗೆ ಬಂದ ಅಧಿಕಾರಿಯೊಬ್ಬರು, ಹುಡುಗರ ಹಾಸ್ಟೆಲ್‌ ನ ಬೆಡ್ ಆರಾಮವಾಗಿದೆಯೇ ಎಂದೂ ಹುಡುಗಿಯೊಬ್ಬಳ ಬಳಿ ಕೇಳಿದ್ದಾರೆ, ನಮ್ಮ ಅನುಮತಿ ಇಲ್ಲದೆ ಕೊಠಡಿಯ ಫೋಟೋ ತೆಗೆದಿದ್ದಾರೆ ಎಂಬುದು ಹುಡುಗಿಯರ ದೂರಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...