alex Certify
ಕನ್ನಡ ದುನಿಯಾ       Mobile App
       

Kannada Duniya

13 ವರ್ಷಗಳ ಬಳಿಕ ಪ್ರಕಟವಾಯ್ತು ನ್ಯಾಯಾಂಗ ನಿಂದನೆ ತೀರ್ಪು

ವಕೀಲರೊಬ್ಬರಿಗೆ ಶಿಕ್ಷೆ ವಿಧಿಸಿದ ಅಪರೂಪದಲ್ಲಿ ಅಪರೂಪದ ಘಟನೆ ಮುಂಬೈ ಹೈಕೋರ್ಟ್ ನ ಔರಂಗಾಬಾದ್ ಬೆಂಚ್ ನಲ್ಲಿ ನಡೆದಿದೆ. 13 ವರ್ಷಗಳಿಂದ ಇತ್ಯರ್ಥವಾಗದೆ ಇದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ವಕೀಲನಿಗೆ ಒಂದು ವಾರ ಜೈಲು ಹಾಗೂ 2000 ರೂಪಾಯಿ ದಂಡ ವಿಧಿಸಿದೆ.

ಆಗಸ್ಟ್ 7, 2005 ರಲ್ಲಿ ರಾಮಚಂದ್ರ ಕಿಸನ್ ರಾವ್ ಕಗ್ನೆ ತನ್ನ ಕಕ್ಷಿದಾರರ ಪರ ವಾದ ಮಾಡಿದ್ದರು. ಕೋರ್ಟ್ ಕಗ್ನೆ ಅವರ ಕಕ್ಷಿದಾರರನ್ನು ಅಪರಾಧಿ ಎಂದು ಘೋಷಿಸಿತ್ತು. ಇದ್ರಿಂದ ವಿಚಲಿತರಾದ ವಕೀಲ, ನ್ಯಾಯಾಧೀಶರ ವಿರುದ್ಧ ಧ್ವನಿ ಎತ್ತಿದ್ದಾರೆ. ಅಲ್ಲದೆ ಅವರತ್ತ ನೋಟ್ ಬುಕ್ ಎಸೆದು, ನ್ಯಾಯಾಂಗ ನಿಂದನೆ ಮಾಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ವಕೀಲನಿಗೆ ಒಂದು ವಾರ ಜೈಲು ಹಾಗೂ 2000 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೆ ದಂಡವನ್ನು ತುಂಬದೇ ಇದ್ದ ಪಕ್ಷದಲ್ಲಿ ಹೆಚ್ಚುವರಿಯಾಗಿ ಎರಡು ದಿನ ಜೈಲಿನಲ್ಲಿ ಇರಬೇಕಾಗುತ್ತದೆ ಎಂದು ಆದೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...