alex Certify
ಕನ್ನಡ ದುನಿಯಾ       Mobile App
       

Kannada Duniya

ಒಳ ಉಡುಪಿನಲ್ಲೇ ಶಾಸನ ಸಭೆಗೆ ಬಂದ ಶಾಸಕ

patnaಪಾಟ್ನಾ: ಅಧಿವೇಶನ ನಡೆಯುವ ಸಂದರ್ಭದಲ್ಲಿ ಶಾಸಕರು ವಿಶೇಷ ಉಡುಪು ಧರಿಸಿ, ಗಮನ ಸೆಳೆಯುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ. ಆದರೆ, ಬಿಹಾರದ ಶಾಸಕರೊಬ್ಬರು ಒಳ ಉಡುಪಿನಲ್ಲೇ ಶಾಸನ ಸಭೆಗೆ ಆಗಮಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಪಶ್ಚಿಮ ಚಂಪಾರಣ್ ಜಿಲ್ಲೆಯ ಲಾವಾರಿಯಾ ವಿಧಾನಸಭೆ ಕ್ಷೇತ್ರದ ಬಿ.ಜೆ.ಪಿ. ಶಾಸಕ ಬಿನಯ್ ಬಿಹಾರಿ ಅವರು ಚೆಡ್ಡಿ, ಬನಿಯನ್ ನಲ್ಲೇ ಸೋಮವಾರ ಅಸೆಂಬ್ಲಿಗೆ ಆಗಮಿಸಿದ್ದಾರೆ. ಬೆಟ್ಟಿಹಾ-ಮಾನಾಪುರ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ, ಸರ್ಕಾರ ಸ್ಪಂದಿಸಿಲ್ಲವಾದ್ದರಿಂದ ಪ್ರತಿಭಟನಾರ್ಥವಾಗಿ ಈ ವೇಷದಲ್ಲಿ ಸದನಕ್ಕೆ ಆಗಮಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಶಿಷ್ಟಾಚಾರ ಉಲ್ಲಂಘನೆ ಕಾರಣಕ್ಕೆ ಬಿನಯ್ ಬಿಹಾರಿ ಅವರಿಗೆ ಸದನದ ಒಳಗೆ ಪ್ರವೇಶ ಸಿಗಲಿಲ್ಲ. ಹೊರಗೆ ಹುಲ್ಲುಹಾಸಿನ ಮೇಲೆಯೇ ಅವರು ಪ್ರತಿಭಟನೆ ನಡೆಸಿ, ಕೇವಲ 44.325 ಕಿಲೋಮೀಟರ್ ಉದ್ದದ ಬೆಟ್ಟಿಹಾ-ಮಾನಾಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಿಲ್ಲ. 2013 ರಲ್ಲಿಯೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಅನುದಾನ ನೀಡುವುದಾಗಿ ಘೋಷಿಸಿದ್ದರೂ, ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದ್ದಾರೆ.

ಹಾಳಾದ ರಸ್ತೆಯಲ್ಲಿ ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹಾಗಾಗಿ ಪ್ರತಿಭಟನೆ ಮಾಡಿ ಗಮನ ಸೆಳೆಯಲು ಹೀಗೆ ಮಾಡಿದ್ದೇನೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...