alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಾಮೀ….ಇದು ಶ್ವಾನೋದ್ಯಾನ…!

ಸಾಕುಪ್ರಾಣಿಗಳೊಂದಿಗೆ ಪಾರ್ಕ್ ಗೆ ಪ್ರವೇಶವಿಲ್ಲ ಎಂಬ ಬೋರ್ಡುಗಳನ್ನು ನೀವು ಪಾರ್ಕುಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲಿ ನಾಯಿ ಇದ್ದರೆ ಮಾತ್ರ ಪ್ರವೇಶ. ಕಾರಣ ಇದು ನಾಯಿಗಳಿಗಾಗಿಯೇ ನಿರ್ಮಾಣವಾಗಲಿರುವ ಪಾರ್ಕು.

ಇಲ್ಲಿ ಶ್ವಾನಗಳು ಎಲ್ಲೆಂದರಲ್ಲಿ ವಿಹರಿಸಬಹುದು. ಅವುಗಳಿಗೆಂದೇ ನಿರ್ಮಿತ ಉಪಕರಣಗಳಲ್ಲಿ ಆಟವಾಡಬಹುದು. ಸ್ಪ್ರಿಂಕ್ಲರ್ ಕಾರಂಜಿಯ ನಡುವೆ ಮಜಾ ಮಾಡಬಹುದು. ಈಜುಕೊಳದಲ್ಲಿ ಜಳಕ ಮಾಡಬಹುದು. ಅವುಗಳಿಗೆ ಅಗತ್ಯವಾದ ಆಹಾರ, ವೈದ್ಯಕೀಯ ಸೇವೆಯೂ ಇಲ್ಲಿ ಲಭ್ಯ.

ಅಷ್ಟೇ ಏಕೆ ಅವುಗಳ ಫಿಟ್ನೆಸ್ ಗಾಗಿ ಜಿಮ್ ಇದ್ದು ವಿಶೇಷ ತರಬೇತಿಯನ್ನೂ ಇಲ್ಲಿ ನೀಡಲಾಗುವುದು. ಒಟ್ಟಾರೆ ನಾಯಿಗಳು ಮಜಾ ಮಾಡಲು ಇದೊಂದು ಪರಿಪೂರ್ಣ ಶ್ವಾನ ಪ್ರಪಂಚ.

ಇದೆಲ್ಲೋ ಪಾಶ್ಚಿಮಾತ್ಯ ದೇಶದ ಬೆಳವಣಿಗೆ ಅಲ್ಲ. ಹೈದರಾಬಾದ್‌ ನ ಗಾಚಿಬೌಲಿಯ 1.3 ಎಕ್ರೆ ಭೂಮಿಯಲ್ಲಿ ಇಂತಹ ಪಾರ್ಕೊಂದು ಸೃಷ್ಟಿಯಾಗಲಿದೆ. ಆಂಧ್ರದ ನಗರಾಭಿವೃದ್ಧ ಸಚಿವ ರಾಮರಾವ್ ಟ್ವೀಟ್ ಮಾಡಿ ಈ ವಿಷಯ ತಿಳಿಸಿರುವುದರಿಂದ ನಂಬಲೇಬೇಕಾಗಿದೆ.

ಹೀಗಾದರೆ ಇದು ದೇಶದ ಮೊದಲ ಶ್ವಾನೋದ್ಯಾನವಾಗಲಿದೆ. ಇದೇ ವೇಳೆ ಮುಂಬೈನಲ್ಲೂ ಇಂತಹ ಡಾಗ್ ಪಾರ್ಕ್ ನಿರ್ಮಾಣವಾಗಲಿದೆ ಎಂಬಂತಹ ಸುದ್ದಿಗಳೂ ಹರಿದಾಡುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...