alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಚಾಲಕನ ಮೇಲೆ ಐಪಿಎಸ್ ಅಧಿಕಾರಿ ಪುತ್ರಿಯಿಂದ ಹಲ್ಲೆ

ವಾಯುವಿಹಾರಕ್ಕೆ ತೆರಳಿದ್ದ ಹಿರಿಯ ಐಪಿಎಸ್ ಅಧಿಕಾರಿಯ ಪತ್ನಿ, ಮತ್ತವರ ಪುತ್ರಿಯನ್ನು ಕಾರು ಚಾಲಕ ಕರೆತರಲು ವಿಳಂಬ ಮಾಡಿದನೆಂಬ ಕಾರಣಕ್ಕೆ, ಐಪಿಎಸ್ ಅಧಿಕಾರಿ ಪುತ್ರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಇದೀಗ ನ್ಯಾಯಾಲಯ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದೆ.

ಕೇರಳದ ತಿರುವನಂತಪುರದಲ್ಲಿ ಈ ಘಟನೆ ನಡೆದಿದ್ದು, ಎಡಿಜಿಪಿ ಸುದೇಶ್ ಕುಮಾರ್ ಅವರ ಸರ್ಕಾರಿ ಕಾರು ಚಾಲಕ ಗವಾಸ್ಕರ್ ಮೇಲೆ ಸುದೇಶ್ ಪುತ್ರಿ ಹಲ್ಲೆ ನಡೆಸಿದ್ದರೆನ್ನಲಾಗಿದೆ. ಈ ಕುರಿತು ದೂರು ದಾಖಲಾಗಿದ್ದು, ಸುದೇಶ್ ಪುತ್ರಿಯ ವಿರುದ್ದ ಜಾಮೀನುರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ.

ವಾಯುವಿಹಾರಕ್ಕೆ ತೆರಳಿದ್ದ ಸುದೇಶ್ ಪತ್ನಿ ಹಾಗೂ ಪುತ್ರಿಯನ್ನು ಕರೆ ತರಲು ಹೋಗಬೇಕಿದ್ದ ಸರ್ಕಾರಿ ಕಾರಿನ ಚಾಲಕ ಗವಾಸ್ಕರ್ ತಡವಾಗಿ ಹೋಗಿದ್ದನೆನ್ನಲಾಗಿದೆ. ಈ ವೇಳೆ ಇಬ್ಬರು, ಆತನನ್ನು ನಿಂದಿಸಲು ಆರಂಭಿಸಿದ್ದು, ಅದಕ್ಕೆ ಆಕ್ಷೇಪಿಸಿದಾಗ ತಮ್ಮ ಕೈಯಲ್ಲಿದ್ದ ಮೊಬೈಲ್ ನಿಂದ ಹೊಡೆದರೆಂದು ಆರೋಪಿಸಲಾಗಿದೆ. ಚಾಲಕ ಗವಾಸ್ಕರ್ ಈ ಕುರಿತು ದೂರು ನೀಡಿದ್ದು, ಸುದೇಶ್ ಪುತ್ರಿಯೂ ಪ್ರತಿದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...