alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ಅಂತ್ಯ ಸಂಸ್ಕಾರ

ಹರ್ಯಾಣದ ಪಲವಲ್ ನ ಪಂಚವಟಿ ಸ್ಮಶಾನದಲ್ಲಿ ಮಾರುಕಟ್ಟೆ ಸಮಿತಿ ಅಧ್ಯಕ್ಷನ ತಂದೆ ಅಂತ್ಯ ಸಂಸ್ಕಾರದ ವೇಳೆ ಜನರು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಅಂತ್ಯ ಸಂಸ್ಕಾರದ ವೇಳೆ ಜೇನು ದಾಳಿ ನಡೆಸಿದ್ದೇ ಇದಕ್ಕೆ ಕಾರಣವಾಗಿದೆ. ಘಟನೆಯಲ್ಲಿ 200 ಮಂದಿಗೆ ಗಾಯಗಳಾಗಿವೆ. 50 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತ್ರ ಸಂಬಂಧಿಕರು ಹೆಲ್ಮೆಟ್ ಧರಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಠಾಕೂರ್ ಬೀರ್ ಸಿಂಗ್ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆದಿತ್ತು. ಈ ವೇಳೆ ಅಚಾನಕ್ ಜೇನುನೊಣಗಳು ದಾಳಿ ಶುರು ಮಾಡಿವೆ. ಆರಂಭದಲ್ಲಿ ಜನರು ಇದನ್ನು ನಿರ್ಲಕ್ಷಿಸಿದ್ದಾರೆ. ಆದ್ರೆ ದಾಳಿ ಜೋರಾಗ್ತಿದ್ದಂತೆ ಅಲ್ಲಿದ್ದ ವಾಹನಗಳನ್ನು ಏರಿದ್ದಾರೆ. ಘಟನೆಯಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದೂರಿನ ಮೇರೆಗೆ ನಗರಸಭೆ ಸಿಬ್ಬಂದಿ ಹೊಗೆ ಹಾಕಿ ಜೇನು ನೊಣಗಳನ್ನು ಓಡಿಸಿದ್ದಾರೆ. ನಂತ್ರ ಸಂಬಂಧಿಕರು ಹೆಲ್ಮೆಟ್ ಧರಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...