alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಸ್ ಕಾರ್ಯಾಚರಣೆ : 2.70 ಕೋಟಿ ಹಳೆ ನೋಟು ಜಪ್ತಿ

untitled1_cvdrby9

ರಾಜಸ್ತಾನದ ರಾಜಧಾನಿ ಜೈಪುರದ ರಾಮಗಂಜ್ ಪ್ರದೇಶದಲ್ಲಿ ಹಳೆಯ 500 ಹಾಗೂ ಸಾವಿರ ಮುಖ ಬೆಲೆಯ 2.70 ಕೋಟಿ ರೂಪಾಯಿ ಪತ್ತೆಯಾಗಿದೆ. ಎಟಿಎಸ್ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಲ್ಲಿ ಹೋಂ ಗಾರ್ಡ್ ಕೂಡ ಶಾಮೀಲ್ ಆಗಿದ್ದಾನೆ. ಒಬ್ಬ ಬಟ್ಟೆ  ವ್ಯಾಪಾರಿಯಾಗಿದ್ದರೆ ಇನ್ನೊಬ್ಬ ಮಿಠಾಯಿ ಅಂಗಡಿ ನಡೆಸುತ್ತಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೋಂ ಗಾರ್ಡ್ 50 ಲಕ್ಷ ರೂಪಾಯಿ ಕಮಿಷನ್ ಪಡೆದು ಹಳೆ ನೋಟುಗಳನ್ನು ಬದಲಾಯಿಸಿಕೊಡುವ ಭರವಸೆ ನೀಡಿದ್ದ. ಶನಿವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. 2.70ಕೋಟಿ ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ.

ಶೇಕಡಾ 25ರಷ್ಟು ಕಮಿಷನ್ ನೀಡಿದ್ರೆ ಹಣ ಬದಲಾಯಿಸಿಕೊಡುವುದಾಗಿ ಹೋಂ ಗಾರ್ಡ್ ಹೇಳಿದ್ದ. ಇದರಂತೆ ವ್ಯಾಪಾರಿಗಳು ಹಳೆ ನೋಟು ತುಂಬಿದ್ದ ಸೂಟ್ ಕೇಸ್ ತಂದಿದ್ದಾರೆ. ಹಣ ಬದಲಾವಣೆಯಾಗುವ ಮೊದಲೇ ಎಟಿಎಸ್ ಕೈಗೆ ಸಿಕ್ಕಿಬಿದ್ದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...