alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಮುಂದೆ ಕ್ಯೂ ನಿಲ್ಲುವವರಿಗೊಂದು ಖುಷಿ ಸುದ್ದಿ

bg-20

ಎಟಿಎಂ ಹಾಗೂ ಬ್ಯಾಂಕ್ ಮುಂದೆ ಈಗ ಕ್ಯೂ ಸಾಮಾನ್ಯವಾಗಿದೆ. ನೋಟು ನಿಷೇಧದ ನಂತ್ರ ನಗದಿನ ಅಭಾವ ಮನೆ ಮಾಡಿದೆ. ವಾರಕ್ಕೆ ಬ್ಯಾಂಕ್ ನಿಂದ 24 ಸಾವಿರ ಹಾಗೂ ಎಟಿಎಂ ನಿಂದ 2,500 ರೂಪಾಯಿ ಮಾತ್ರ ಡ್ರಾ ಮಾಡಲು ಸರ್ಕಾರ ಅವಕಾಶ ನೀಡಿದೆ. ಆದ್ರೆ ಎಟಿಎಂ ಹಾಗೂ ಬ್ಯಾಂಕ್ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಜನರು ಸದ್ಯವೇ ನಿಟ್ಟುಸಿರು ಬಿಡಬಹುದು.

ಕೇಂದ್ರ ಸರ್ಕಾರ ಸದ್ಯದಲ್ಲಿಯೇ ಬ್ಯಾಂಕ್ ಹಾಗೂ ಎಟಿಎಂನಲ್ಲಿ ಹಣ ಡ್ರಾ ಮಾಡುವ ಮಿತಿಯನ್ನು ಹೆಚ್ಚಿಸಲಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ನೋಟು ನಿಷೇಧದ ನಂತ್ರ ವಿಧಿಸಿರುವ ಎಲ್ಲ ಮಿತಿಯನ್ನು ಸದ್ಯದಲ್ಲಿಯೇ ಸರ್ಕಾರ ತೆಗೆದುಹಾಕಲಿದೆ ಎಂದು ಭರವಸೆ ನೀಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಎರಡು ದಿನಕ್ಕೊಮ್ಮೆ ಹಾಗೂ ಹಣಕಾಸು ಸಚಿವರು ದಿನಕ್ಕೊಮ್ಮೆ ಬ್ಯಾಂಕ್ ಹಾಗೂ ಎಟಿಎಂ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ನೋಟು ನಿಷೇಧದಿಂದ ಜನಸಾಮಾನ್ಯರಿಗೆ ಲಾಭವಾಗಲಿದೆ. ಕಪ್ಪುಹಣವುಳ್ಳವರಿಗೆ ಹಾಗೂ ಭ್ರಷ್ಟಾಚಾರಿಗಳಿಗೆ ಹಾನಿಯಾಗಲಿದೆ ಎಂದು ನಾಯ್ಡು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...