alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: 22500 ಎಟಿಎಂ ಶುರು ಮಾಡಲಿದೆ ಕೆಲಸ

atm-queue

ನೋಟು ನಿಷೇಧದ ನಂತ್ರ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗೆ ಅಂತ್ಯ ಹಾಡಲು ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡ್ತಾ ಇದೆ. ಎಟಿಎಂ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ಹಣ ಸಿಗ್ತಾ ಇಲ್ಲ. ಜೊತೆಗೆ ಅನೇಕ ಎಟಿಎಂಗಳು ಬಾಗಿಲು ಮುಚ್ಚಿವೆ.

ಆದ್ರೆ ಇನ್ಮುಂದೆ ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಯಾಕೆಂದ್ರೆ ಇಂದಿನಿಂದ 22500 ಎಟಿಎಂಗಳು ಕೆಲಸ ಮಾಡಲಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಇಂದಿನಿಂದ 22 ಸಾವಿರದ 500 ಎಟಿಎಂಗಳಲ್ಲಿ 500 ಹಾಗೂ 2 ಸಾವಿರ ಮತ್ತು 100 ರೂಪಾಯಿ ನೋಟುಗಳು ಸಿಗಲಿವೆ ಎಂದು ಜೇಟ್ಲಿ ತಿಳಿಸಿದ್ದಾರೆ. ಹಾಗೆ ಸಾವಿರ ಮುಖಬೆಲೆಯ ನೋಟುಗಳ ಬಗ್ಗೆ ಸರ್ಕಾರ ಯಾವುದೇ ಯೋಜನೆ ರೂಪಿಸಿಲ್ಲ ಎಂದಿದ್ದಾರೆ.

ಬದಲಾಯಿಸಿಕೊಳ್ಳಬಹುದಾದ ಹಣವನ್ನು 4500 ರೂಪಾಯಿಯಿಂದ 2 ಸಾವಿರ ರೂಪಾಯಿಗೆ ಇಳಿಸಲು ಮಹತ್ವದ ಕಾರಣವಿದೆ. ಯೋಜನೆಯ ದುರುಪಯೋಗವಾಗುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆ ಹಾಗೂ ಕೆಲ ಕೇಂದ್ರಗಳಿಗೆ ಹಣ ಬದಲಾವಣೆಗೆ ಅವಕಾಶ ನೀಡಲಿಲ್ಲ. ಯಾಕೆಂದ್ರೆ ಅದು ಹಣ ವಿನಿಮಯ ಕೇಂದ್ರವಾಗಿ ಬದಲಾಗಲಿದೆ ಎಂದು ಜೇಟ್ಲಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...