alex Certify
ಕನ್ನಡ ದುನಿಯಾ       Mobile App
       

Kannada Duniya

ಚೌತಿ ಸ್ಪೆಷಲ್: ಈ ಎಟಿಎಂನಲ್ಲಿ ಬರ್ತಿದೆ ಮೋದಕ

ಇಲ್ಲಿಯವರೆಗೆ ಎಟಿಎಂ ಮಷಿನ್ ನಲ್ಲಿ ಹಣ, ಹಾಲು, ನೀರು ಬಂದಿರುವುದನ್ನು ನೀವು ಕೇಳಿರಬಹುದು. ಈಗ ಎಟಿಎಂ ಮಷಿನ್ ನಲ್ಲಿ ಮೋದಕ ಕೂಡ ಬರ್ತಿದೆ. ಯಸ್, ಪುಣೆಯ ವ್ಯಕ್ತಿಯೊಬ್ಬರು ಈ ವಿಶೇಷ ಎಟಿಎಂ ಮಷಿನ್ ಸಿದ್ಧಪಡಿಸಿದ್ದಾರೆ. ಕಾರ್ಡ್ ಒಂದನ್ನು ಹಾಕಿದ್ರೆ ಇದ್ರಲ್ಲಿ ಗಣಪತಿ ಪ್ರಸಾದ ಮೋದಕ ಹೊರ ಬರುತ್ತದೆ.

ಪುಣೆಯ ಸಂಜಯ್ ಕುಲಕರ್ಣಿ ಈ ಮಷಿನ್ ಸಿದ್ಧಪಡಿಸಿದ್ದಾರೆ. ಈ ಎಟಿಎಂ ಮಷಿನ್ ಅರ್ಥ ಎನಿ ಟೈಂ ಮೋದಕ. ಪುಣೆಯ ಶಂಕರ ನಗರದಲ್ಲಿ ಈ ಮೋದಕ ಎಟಿಎಂ ಎಲ್ಲರ ಗಮನ ಸೆಳೆಯುತ್ತಿದೆ. ಎಲ್ಲ ಎಟಿಎಂಗಳಲ್ಲಿ ನಂಬರ್ ಇದ್ರೆ ಈ ಮಷಿನ್ ನಲ್ಲಿ ಧಾರ್ಮಿಕ ಪದಗಳಿವೆ. ಕ್ಷಮೆ, ದಾನ, ಸತ್ಯ, ಸದ್ಗುಣ, ಶಾಂತಿ, ಭಕ್ತಿ, ಪ್ರೀತಿ, ಭಾವನೆ, ಜ್ಞಾನ, ಸಂತೋಷ, ನಿಷ್ಠೆ ಎಂದು ಬರೆಯಲಾಗಿದೆ.

ತಂತ್ರಜ್ಞಾನ ಹಾಗೂ ಸಂಸ್ಕೃತಿಯನ್ನು ಒಂದುಗೂಡಿಸುವ ಉದ್ದೇಶದಿಂದ ಎನಿ ಟೈಮ್ ಮೋದಕ ಎಟಿಎಂ ತಯಾರಿಸಲಾಗಿದೆಯಂತೆ. ವಿಶೇಷ ಕಾರ್ಡ್ ಬಳಸಿ ಪ್ರಸಾದ ಪಡೆಯಬಹುದೆಂದು ಸಂಜಯ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...