alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂನಿಂದ ಬಂತು ಅರ್ಧ ಮುದ್ರಣವಾದ 2 ಸಾವಿರ ರೂ. ನೋಟು

ಎರಡು ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳು ಮಾರುಕಟ್ಟೆಗೆ ಬಂದು ವರ್ಷವಾಗ್ತಾ ಬಂತು. ಮಾರುಕಟ್ಟೆಯಲ್ಲಿ ಎರಡು ಸಾವಿರ ಮುಖ ಬೆಲೆಯ ನೋಟುಗಳು ಹರಿದಾಡ್ತಿವೆ. ಜೊತೆಗೆ ಹರಿದ, ಅರ್ಧ ಮುದ್ರಣವಾದ ನೋಟುಗಳು ಎಟಿಎಂನಲ್ಲಿ ಸಿಗ್ತಿವೆ. ಈಗ ರಾಷ್ಟ್ರ ರಾಜಧಾನಿ ದೆಹಲಿಯ ಎಟಿಎಂನಲ್ಲಿ ಅರ್ಧ ಮುದ್ರಣವಾದ ನೋಟು ಸಿಕ್ಕಿದೆ.

ಜಾಮಿಯಾ ನಗರ್ ಇಲಾಖೆಯ ಡಿಸಿಬಿ ಬ್ಯಾಂಕ್ ಎಟಿಎಂನಲ್ಲಿ ಅರ್ಧ ಮುದ್ರಣವಾದ ನೋಟು ಸಿಕ್ಕಿದೆ. ಶಾದಬ್ ಚೌಧರಿ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಹಣ ತೆಗೆಯಲು ಎಟಿಎಂಗೆ ಹೋಗಿದ್ದಾರೆ. ಎಟಿಎಂನಿಂದ ಬಂದ 2 ಸಾವಿರ ರೂಪಾಯಿ ನೋಡಿ ಚೌಧರಿ ದಂಗಾಗಿದ್ದಾರೆ. ಒಂದು ಕಡೆ ನೋಟು ಮುದ್ರಣವಾಗಿದ್ದರೆ ಇನ್ನೊಂದು ಕಡೆ ಬರಿ ಹಾಳೆಯಿತ್ತು ಎನ್ನಲಾಗಿದೆ.

ಚೌಧರಿ ಬ್ಯಾಂಕ್ ಗೆ ಹೋಗಿ ಈ ಬಗ್ಗೆ ವಿಚಾರಿಸಿದ್ದಾರೆ. ಬ್ಯಾಂಕ್ ನವರು ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. ಪೊಲೀಸ್ ಠಾಣೆಗೂ ಚೌಧರಿ ದೂರು ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...