alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನೂ ಸುಧಾರಿಸಿಲ್ಲ ಎಟಿಎಂ ಹಣಕಾಸು ಪರಿಸ್ಥಿತಿ

ಭಾರತೀಯರು ಎಂದು ಮರೆಯದ ದಿನ, ನವೆಂಬರ್ 8, 2016. ಆ ದಿನ ರಾತ್ರಿ ಪ್ರಧಾನಿ ಮೋದಿ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದರು.

ನೋಟ್‌ ಬ್ಯಾನ್ ಆಗಿ 17 ತಿಂಗಳೇ ಕಳೆದಿವೆ. ಆದ್ರೆ ಪರಿಸ್ಥಿತಿ ಏನು ಬದಲಾವಣೆ ಆಗಿಲ್ಲ.  ಹೌದು….ಎಟಿಎಂ ಮಶೀನ್‌ಗಳಲ್ಲಿ ನೋ ಕ್ಯಾಶ್ ಬೋರ್ಡ್ ಎಲ್ಲ ಕಡೆ ಸಾಮಾನ್ಯವಾಗಿದೆ. ಇನ್ನು ಜನ ಕೆಲವು ಕಡೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುವುದು ಕಂಡು ಬರುತ್ತಿದೆ. ಈ ಪರಿಸ್ಥಿತಿಗೆ ಕೇಂದ್ರದ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಎಐಸಿಸಿ ದೂರಿದೆ.

ಎಐಸಿಸಿ ವಕ್ತಾರರಾದ ಪ್ರಿಯಾಂಕ ಚರ್ತುರ್ವೇದಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಆ ಪಕ್ಷದ ಆದಾಯ ಶೇ. 80 ರಷ್ಟು ಹೆಚ್ಚಾಗಿದೆ. ಆದರೆ ಜನ ಸಾಮಾನ್ಯರ ಕೈಯಲ್ಲಿ ಹಣವಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರನ ಆದಾಯದಲ್ಲಿಯೂ ನಿವ್ವಳವಾಗಿ ಹೆಚ್ಚಾಗಿದೆ. ಇನ್ನು ನೋಟ್ ಬ್ಯಾನ್ ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 21 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಮೋದಿ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...