alex Certify
ಕನ್ನಡ ದುನಿಯಾ       Mobile App
       

Kannada Duniya

ಜುಲೈನಲ್ಲಿ ಬ್ಯಾಂಕ್ ಗಳಿಗೆ 11 ದಿನ ರಜೆ

bank

ನವದೆಹಲಿ: ನಿಮ್ಮ ಯಾವುದೇ ವ್ಯವಹಾರಗಳಿದ್ದಲ್ಲಿ ಶೀಘ್ರವೇ ಮುಗಿಸಿಕೊಳ್ಳಿ. ಜುಲೈನಲ್ಲಿ ಬ್ಯಾಂಕ್  ಗಳಿಗೆ ಬರೋಬ್ಬರಿ 11 ದಿನ ರಜೆ ಇರುತ್ತದೆ. ಒಂದೇ ತಿಂಗಳ ಅವಧಿಯಲ್ಲಿ ಇಷ್ಟೊಂದು ರಜೆ ಇರುವುದರಿಂದ ನೀವು ತೊಂದರೆ ಅನುಭವಿಸಬೇಕಾದೀತು.

ಜುಲೈನಲ್ಲಿ ವಾರದ ರಜೆ ಹೊರತಾಗಿ ರಂಜಾನ್ ಹಬ್ಬಕ್ಕೆ ರಜೆ ಇರುತ್ತದೆ. ಇದರೊಂದಿಗೆ ಜುಲೈ 12,13 ಹಾಗೂ 29 ರಂದು ಬ್ಯಾಂಕ್ ಉದ್ಯೋಗಿಗಳು ಮುಷ್ಕರ ಕೈಗೊಂಡಿದ್ದು, ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಬರೋಬ್ಬರಿ 11 ದಿನ ರಜೆ ಸಿಕ್ಕಂತಾಗುತ್ತದೆ. ಗ್ರಾಹಕರು ತಮ್ಮ ಬ್ಯಾಂಕ್ ವ್ಯವಹಾರಗಳಿದ್ದಲ್ಲಿ ಆದಷ್ಟು ಬೇಗ ಮುಗಿಸಿಕೊಂಡರೆ ಒಳಿತು. ಇಲ್ಲವಾದರೆ, ಚೆಕ್ ಕ್ಲಿಯರೆನ್ಸ್, ಆನ್ ಲೈನ್ ಕ್ಲಿಯರೆನ್ಸ್ ಮೊದಲಾದ ಬ್ಯಾಂಕಿಂಗ್ ವ್ಯವಹಾರಗಳಿಗೆ ತೊಂದರೆಯಾಗಬಹುದೆಂದು ಹೇಳಲಾಗಿದೆ.

ಸಾಲ ಮಂಜೂರು, ಡಿಮಾಂಡ್ ಡ್ರಾಫ್ಟ್, ನಗದು ಜಮಾ ಮೊದಲಾದ ಕೆಲಸಗಳಿದ್ದಲ್ಲಿ ವಿಳಂಬ ಮಾಡಿದರೆ ಹೆಚ್ಚು ಸಮಯ ಹಿಡಿಯಬಹುದು. ಎ.ಟಿ.ಎಂ.ಗಳಲ್ಲಿ ಹಣ ತುಂಬುವ ಸೇವೆಯನ್ನು ಬಹುತೇಕ ಬ್ಯಾಂಕ್ ಗಳು ಖಾಸಗಿಯವರಿಗೆ ವಹಿಸಿದ್ದು, ತೊಂದರೆಯಾಗಲಾರದು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...