alex Certify
ಕನ್ನಡ ದುನಿಯಾ       Mobile App
       

Kannada Duniya

ಬರ್ತಿಲ್ಲ ಹಣ, ಬಿತ್ತು ನೋ ಕ್ಯಾಶ್ ಬೋರ್ಡ್

no-cash-ss

ನೋಟ್ ಬ್ಯಾನ್ ಬಳಿಕ ಏನೋ ಒಳ್ಳೆದಾಗುತ್ತೆ ಎಂದುಕೊಂಡಿದ್ದ ಜನ ಸಾಮಾನ್ಯರಿಗೆ ಸಂಕಷ್ಟ ಜಾಸ್ತಿಯಾಗತೊಡಗಿದೆ. ನಗದು ಕೊರತೆಯಿಂದಾಗಿ ಎಲ್ಲೆಲ್ಲೂ ಸಮಸ್ಯೆ ಎದುರಾಗಿದೆ. ಹಣ ಸಿಗದೇ ಜನ ಹೈರಾಣಾಗಿದ್ದಾರೆ.

ಇದರೊಂದಿಗೆ ಸ್ಯಾಲರಿ ದಿನಗಳಾಗಿರುವುದರಿಂದ ವೇತನಕ್ಕೆ ನಗದು ಕೊರತೆಯಾಗದಂತೆ ನೋಡಿಕೊಳ್ಳಲಾಗುವುದೆಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಹೇಳಿದೆ. ಆದರೆ, ಬ್ಯಾಂಕ್ ಗಳಲ್ಲಿ, ಎ.ಟಿ.ಎಂ.ಗಳಲ್ಲಿ ಹಣವೇ ಸಿಗುತ್ತಿಲ್ಲ. ಬಹಳಷ್ಟು ಎ.ಟಿ.ಎಂ. ಗಳಲ್ಲಿ ನೋ ಕ್ಯಾಶ್ ಬೋರ್ಡ್ ಹಾಕಲಾಗಿದೆ. ಬ್ಯಾಂಕ್ ಗಳಲ್ಲಿಯೂ ಹಣಕ್ಕಾಗಿ ಭಾರೀ ಕ್ಯೂ ಇದೆ. ಖಾತೆಯಲ್ಲಿ ಹಣವಿದ್ದರೂ ಪಡೆದುಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿ ಜನರಿದ್ದಾರೆ.

ಜನರ ತಾಳ್ಮೆಯ ಕಟ್ಟೆಯೊಡೆದು, ಕೆಲವೆಡೆ ಬ್ಯಾಂಕ್ ಬಂದ್ ಮಾಡಿ ಪ್ರತಿಭಟಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಯೊಂದಿಗೆ ಜಗಳ, ವಾಗ್ವಾದ ಮಾಮೂಲಿಯಾಗಿದೆ. ಸರ್ಕಾರ, ಆರ್.ಬಿ.ಐ. ನವೆಂಬರ್ 8 ರಿಂದ ಹಣ ಜಮಾವಣೆ ಮತ್ತು ವಿನಿಮಯ ಹಾಗೂ ವಿತ್ ಡ್ರಾ ಗೆ ಸಂಬಂಧಿಸಿದಂತೆ ದಿನಕ್ಕೊಂದು ಆದೇಶ, ಸೂಚನೆ ನೀಡುತ್ತಿದ್ದು, ಹೆಚ್ಚಿನ ಜನರಿಗೆ ಮಾಹಿತಿ ಕೊರತೆ ಎದುರಾಗಿದೆ.

ವಿತ್ ಡ್ರಾ ಲಿಮಿಟ್ ನಲ್ಲಿ ಏರಿಕೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ಸಿಗುವ 2000 ರೂ. ನೋಟಿಗೆ ಚಿಲ್ಲರೆ ಸಮಸ್ಯೆ ಎದುರಾಗಿದೆ. ನಗದು ಕೊರತೆ ಎದುರಾಗಿರುವುದರಿಂದ ಪರಿಸ್ಥಿತಿ ಬಿಗಡಾಯಿಸಿದ್ದು, ಎ.ಟಿ.ಎಂ.ಗಳು ಬಹುತೇಕ ಬಂದ್ ಆಗಿವೆ. ಒಟ್ಟಿನಲ್ಲಿ ಹಣ ಸಿಗದೆ ಜನ ಹೈರಾಣಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...