alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಅಟಲ್ ಪಿಂಚಣಿ ಯೋಜನೆ ಅನಿರ್ದಿಷ್ಟಾವಧಿಗೆ ವಿಸ್ತರಣೆ

ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲೊಂದಾದ ಅಟಲ್ ಪಿಂಚಣಿ ಯೋಜನೆ ಅನಿರ್ದಿಷ್ಟ ಅವಧಿಗೆ ವಿಸ್ತರಣೆಗೊಂಡಿದೆ. ಕೇಂದ್ರ ಸಂಪುಟ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

2018ರ ಆಗಸ್ಟ್ ಗೆ ಈ ಯೋಜನೆ ಕೊನೆಯಾಗಿತ್ತು. ಇದೀಗ ವಿವಿಧ ಪರಿಷ್ಕರಣೆಯೊಂದಿಗೆ ಯೋಜನೆ ಮುಂದುವರೆಸಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲದೇ ಅಪಘಾತ ವಿಮೆ ದುಪ್ಪಟ್ಟು ಪ್ರಮಾಣದಲ್ಲಿ ಏರಿಸಿದ್ದು, ವಯೋಮಿತಿಯನ್ನೂ ಸಹ ಐದು ವರ್ಷ ಸಡಿಲಿಸಿದೆ.

ಅಟಲ್ ಪಿಂಚಣಿ ಯೋಜನೆ 2015ರಲ್ಲಿ ಪ್ರಾರಂಭಿಸಿದ ಸಾಮಾಜಿಕ ಭದ್ರತಾ ಯೋಜನೆ. ಒಂದು ಸಾವಿರದಿಂದ 5 ಸಾವಿರ ರೂಪಾಯಿವರೆಗೆ ಪಿಂಚಣಿ ಲಭ್ಯವಾಗಿಸೋ ಕಾರ್ಯಕ್ರಮ.

ಯೋಜನೆ ವಿಸ್ತರಣೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಈ ಯೋಜನೆಯನ್ನು ಕುಟುಂಬವನ್ನು ಕೇಂದ್ರೀಕರಿಸುವ ಬದಲು ವ್ಯಕ್ತಿ ಕೇಂದ್ರೀಕರಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ 1 ಕೋಟಿ ಜನ ಈ ಯೋಜನೆ ಪಾಲುದಾರರಾಗಿದ್ದಾರೆ.

ಈವರೆಗೆ ಯೋಜನೆ 18ರಿಂದ 60 ವರ್ಷ ವಯೋಮಿತಿಯವರಿಗೆ ಅನ್ವಯವಾಗುತ್ತಿತ್ತು. ಇನ್ನು ಮುಂದೆ 65 ವರ್ಷದವರೆಗೂ ವಿಸ್ತರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...