alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕಾರಣಿಯಾಗ ಬಯಸಿರಲಿಲ್ಲ ವಾಜಪೇಯಿ

ಅಜಾತ ಶತ್ರು ಎಂದೇ ಹೆಸರಾದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ  ವಾಜಪೇಯಿ ಕೊನೆಯುಸಿರೆಳೆದಿದ್ದಾರೆ. ಜೂನ್ 11ರಿಂದ ಆಗಸ್ಟ್ 16ರವರೆಗೆ ಆಸ್ಪತ್ರೆಯಲ್ಲಿ ಹೋರಾಡಿದ ವಾಜಪೇಯಿ ಇಂದು ಸಂಜೆ 5 ಗಂಟೆ 5 ನಿಮಿಷಕ್ಕೆ ನಮ್ಮನ್ನಗಲಿದ್ದಾರೆ.

ರಾಜಕೀಯ ಭೀಷ್ಮ ವಾಜಪೇಯಿ ಅಜಾತ ಶತ್ರು. ಪಕ್ಷ, ವಿರೋಧ ಪಕ್ಷ ಸೇರಿದಂತೆ ದೇಶ-ವಿದೇಶಿಗರ ಮನಸ್ಸು ಗೆದ್ದವರು ಅವ್ರು. ಅವ್ರ ಆಡಳಿತಾವಧಿಯಲ್ಲಿ ಅವ್ರು ಮಾಡಿದ ಕೆಲಸಗಳನ್ನು ಮರೆಯಲು ಸಾಧ್ಯವಿಲ್ಲ. ವಾಜಪೇಯಿ ಜೀವನದ ಕೆಲ ಸಂಗತಿಗಳು ಇಲ್ಲಿವೆ.

ಅಟಲ್ ಬಿಹಾರಿ ವಾಜಪೇಯಿ ತಂದೆ ಜೊತೆ ಕಾನ್ಪುರದ ಡಿವಿಎ ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡ್ತಿದ್ದರು. ಇಬ್ಬರೂ ಒಂದೇ ಕ್ಲಾಸಿನಲ್ಲಿ ಓದುತ್ತಿದ್ದರು. ಹಾಸ್ಟೆಲ್ ನಲ್ಲಿ ಕೂಡ ಒಂದೇ ರೂಮಿನಲ್ಲಿದ್ದರು. ವಿದ್ಯಾರ್ಥಿಗಳು ಇವ್ರ ಬಗ್ಗೆ ಮಾತನಾಡ್ತಿದ್ದಂತೆ ಸೆಕ್ಷನ್ ಬದಲಿಸಿದ್ದರು.

ಸಂದರ್ಶನವೊಂದರಲ್ಲಿ ವಾಜಪೇಯಿ ನಾನು ಪತ್ರಕರ್ತನಾಗಲು ಇಚ್ಛಿಸಿದ್ದೆ. ಆದ್ರೆ ಅಪ್ಪಿತಪ್ಪಿ ರಾಜಕೀಯಕ್ಕೆ ಬಂದೆ ಎಂದಿದ್ದರು.

ವಾಜಪೇಯಿ ವ್ಯಕ್ತಿತ್ವವನ್ನು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಕೂಡ ಮೆಚ್ಚಿಕೊಂಡಿದ್ದರಂತೆ. ಮುಂದೊಮ್ಮೆ ಇವ್ರು ದೇಶದ ಪ್ರಧಾನಿಯಾಗ್ತಾರೆಂದು ಭವಿಷ್ಯ ನುಡಿದಿದ್ದರಂತೆ.

26 ಪಕ್ಷಗಳ ಜೊತೆ ಸರ್ಕಾರ ನಡೆಸಿದ ದೇಶದ ಮೊದಲ ಪ್ರಧಾನಿ ವಾಜಪೇಯಿ. 1984ರಲ್ಲಿ ಗ್ವಾಲಿಯರ್ ನಲ್ಲಿ ಕಾಂಗ್ರೆಸ್ ಪರ ಮತದಾನ ಮಾಡುವಂತೆ ಮನವಿ ಮಾಡಿದ್ದ ವಾಜಪೇಯಿ ಆ ಚುನಾವಣೆಯಲ್ಲಿ ಮಾತ್ರ ಸೋಲುಂಡಿದ್ದರು.

9 ಬಾರಿ ಲೋಕಸಭೆಗೆ ಆಯ್ಕೆಯಾಗಿ ದಾಖಲೆ ಬರೆದಿರುವ ವಾಜಪೇಯಿ 2 ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಮದುವೆಯಾಗದ ವಾಜಪೇಯಿ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದಾರೆ. ಅವ್ರ ಹೆಸರು ನಮಿತಾ.

ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಹಾಗೂ ದೆಹಲಿಯಿಂದ ಸಂಸದರಾಗಿ ಆಯ್ಕೆಯಾದ ದಾಖಲೆ ವಾಜಪೇಯಿ ಹೆಸರಿನಲ್ಲಿದೆ.

ಕವಿತೆಯಲ್ಲಿ ಆಸಕ್ತಿ ಹೊಂದಿದ್ದ ವಾಜಪೇಯಿ ಜಗ್ಜಿತ್ ಸಿಂಗ್ ಸಹಯೋಗದೊಂದಿಗೆ ಎರಡು ಆಲ್ಬಂ ಬಿಡುಗಡೆ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...