alex Certify
ಕನ್ನಡ ದುನಿಯಾ       Mobile App
       

Kannada Duniya

ವಾಜಪೇಯಿ 13 ವರ್ಷಗಳ ಹಿಂದೆ ಮಾಡಿದ್ರು ಕೊನೆಯ ಸಾರ್ವಜನಿಕ ಭಾಷಣ

ಅಟಲ್ ಬಿಹಾರಿ ವಾಜಪೇಯಿ ಭಾರತ ಮಾತೆಯ ಪುತ್ರರತ್ನ. ಅತ್ಯುತ್ತಮ ಭಾಷಣಕಾರ ವಾಜಪೇಯಿ ಭಾಷಣಕ್ಕೆ ನಿಂತ್ರೆ ನೆರದಿದ್ದವರು ನಿಶಬ್ಧವಾಗಿ ಭಾಷಣ ಕೇಳುತ್ತಿದ್ದರು. ಮಾತಿನಲ್ಲಿಯೇ ಮೋಡಿ ಮಾಡ್ತಿದ್ದ ವಾಜಪೇಯಿ ಭಾಷಣದಲ್ಲಿ ಕಾರ್ಯಕರ್ತರನ್ನು ಕಟ್ಟಿಹಾಕುವ ಶಕ್ತಿಯಿತ್ತು.

ದೇಶದ ಸಜ್ಜನ ಪ್ರಧಾನ ಮಂತ್ರಿ ಎಂದೇ ಹೆಸರು ಪಡೆದಿದ್ದ ವಾಜಪೇಯಿ ಸಂಸತ್ ನಲ್ಲಿ ಸ್ಫೂರ್ತಿದಾಯಕ ಭಾಷಣ ಮಾಡಿ ರಾಜೀನಾಮೆ ನೀಡಿದ್ದರು. 1977 ರಲ್ಲಿ ವಿಶ್ವಸಂಸ್ಥೆಯಲ್ಲಿ ವಾಜಪೇಯಿ ಮಾಡಿದ ಭಾಷಣ ದೇಶಕ್ಕೆ ಹೆಮ್ಮೆ ತಂದಿತ್ತು.

ವಿದೇಶಾಂಗ ಮಂತ್ರಿಯಾಗಿದ್ದ ವಾಜಪೇಯಿ ಯುಎನ್ ಸಮ್ಮೇಳನದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದರು. ಅಂತರಾಷ್ಟ್ರೀಯ ವೇದಿಕೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದು ಇದೇ ಮೊದಲಾಗಿತ್ತು. ಅಲ್ಲಿ ನೆರೆದಿದ್ದ ವಿದೇಶಿ ನಾಯಕರು ಎದ್ದು ನಿಂತು ವಾಜಪೇಯಿಗೆ ಗೌರವ ಸಲ್ಲಿಸಿದ್ದರು.

ಕಳೆದ ಕೆಲವು ವರ್ಷಗಳಿಂದ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳು ಅವ್ರನ್ನು ಹೈರಾಣ ಮಾಡಿದ್ದವು. 2005ರಲ್ಲಿ ಇದೇ ಕಾರಣಕ್ಕೆ ವಾಜಪೇಯಿ ರಾಜಕೀಯದಿಂದ ದೂರ ಸರಿದ್ರು. ನಿವೃತ್ತಿ ವೇಳೆ ಅವ್ರು ಮಾಡಿದ ಭಾಷಣ ಅಂತಿಮ ಭಾಷಣವಾಗಿದೆ. ಇದಾದ ನಂತ್ರ ಅನೇಕ ಕಾರ್ಯಕ್ರಮಗಳಲ್ಲಿ ವಾಜಪೇಯಿ ಪಾಲ್ಗೊಂಡಿದ್ದರು. ಆದ್ರೆ ಅಲ್ಲಿ ವೀರೋಚಿತ ಭಾಷಣ ಕೇಳಲು ಸಾಧ್ಯವಾಗಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...