alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದಿಯಲ್ಲಿಯೇ ಇಂಜಿನಿಯರಿಂಗ್ ಬೋಧಿಸಲಾಗುತ್ತೆ ಅಟಲ್ ಜಿ ಹೆಸರಿನ ಈ ವಿಶ್ವವಿದ್ಯಾಲಯದಲ್ಲಿ…!

ಭೋಪಾಲ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಲ್ಲಿರುವ ಮಧ್ಯಪ್ರದೇಶದ ಭೋಪಾಲ್​ನ ಈ ವಿಶ್ವವಿದ್ಯಾನಿಯಯದಲ್ಲಿ ಕೇವಲ ಹಿಂದಿ ಭಾಷೆಯಲ್ಲೇ ಇಂಜಿನಿಯರಿಂಗ್​ ಬೋಧಿಸಲಾಗುತ್ತದೆ ಎಂಬುದು ವಿಶೇಷ.

ಭೋಪಾಲ್​ನ ಮುಗಲಿಯಾ ಕೋಟ್​ನಲ್ಲಿರುವ ಈ ಹಿಂದಿ ವಿಶ್ವವಿದ್ಯಾಲಯ 2013ರಲ್ಲಿ ಆರಂಭವಾಯಿತು. ಅಂದಿನಿಂದ ಇಲ್ಲಿ ಹಿಂದಿ ಭಾಷೆಯಲ್ಲಿ ಎಂಜಿನಿಯರಿಂಗ್ ಪದವಿ ನೀಡಲಾಗುತ್ತಿದೆ. ಆರಂಭದಲ್ಲಿ ಇಲ್ಲಿ 90 ಸೀಟುಗಳನ್ನು ಕಾಯ್ದಿರಿಸಲಾಗಿತ್ತು. ಆದರೀಗ ಈ ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗಕ್ಕೆ ಬರುತ್ತಿದ್ದಾರೆ.

ಹಿಂದಿಯಲ್ಲಿ ಇಂಜಿನಿಯರಿಂಗ್​ ಪಠ್ಯಕ್ರಮವನ್ನು ಎಲ್ಲಾ ಸಿದ್ಧತೆಗಳೊಂದಿಗೆ ಆರಂಭಿಸಿದ್ದು, ಅಂತೆಯೇ ಮೆಕ್ಯಾನಿಕಲ್​, ಸಿವಿಲ್ ಹಾಗೂ ಇಲೆಕ್ಟ್ರಿಕಲ್​ ವಿಭಾಗಗಳಿಗೆ ಇಂಜಿನಿಯರಿಂಗ್​ ಹಾಗೂ ಡಿಪ್ಲೊಮಾಗೆ ಪ್ರವೇಶಾತಿಯನ್ನೂ ಆರಂಭಿಸಿದೆ.

ವಿಶ್ವವಿದ್ಯಾನಿಲಯದ ಕುಲಪತಿಯಾದ ಪ್ರೊ. ಮೋಹನ್​ಲಾಲ್​ ಹೇಳುವ ಪ್ರಕಾರ, ಸುಮಾರು 250 ಇಂಜಿನಿಯರಿಂಗ್​ ಹಾಗೂ ಮೆಡಿಕಲ್​ ಕಾಲೇಜುಗಳಲ್ಲಿ ಆಂಗ್ಲ ಭಾಷೆಯ ಸಾಮ್ರಾಜ್ಯವಿದೆ. ಹೀಗಿರುವಾಗ ಹಿಂದಿ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಭೋದಿಸುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...