alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರ ಅದೃಷ್ಟ ಬದಲಿಸಿತ್ತು ವಾಜಪೇಯಿಯವರಿಂದ ಬಂದಿದ್ದ ಆ ಕರೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೀರ್ಘ ಕಾಲದ ಅನಾರೋಗ್ಯದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದು, ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಈ ಮಟ್ಟಕ್ಕೇರಲು ವಾಜಪೇಯಿ ಪ್ರಮುಖ ಕಾರಣರೆಂಬುದು ಗಮನಾರ್ಹ.

ನರೇಂದ್ರ ಮೋದಿ ಆ ಸಮಯದಲ್ಲಿ ಸ್ಮಶಾನದಲ್ಲಿದ್ದರು. ಛಾಯಾಗ್ರಾಹಕರೊಬ್ಬರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಆಗ ಮೋದಿಯವರಿಗೆ ಬಂದ ಕರೆಯೊಂದು ಅವರ ಜೀವನದ ದಿಕ್ಕನ್ನು ಬದಲಿಸ್ತು.

ಮೋದಿಗೆ ಕರೆ ಬಂದಿದ್ದು ಪ್ರಧಾನ ಮಂತ್ರಿ ಕಚೇರಿಯಿಂದ. ಗುಜರಾತ್ ಗೆ ಹೋಗಿ ಅಲ್ಲಿ ಪಕ್ಷದ ಜವಾಬ್ದಾರಿ ಹೊತ್ತುಕೊಳ್ಳುವಂತೆ ನಿರ್ದೇಶನ ಬಂದಿತ್ತು. ಅಟಲ್ ಬಿಹಾರಿ ವಾಜಪೇಯಿ 7 ಆರ್ ಸಿ ಆರ್ ಗೆ ಬರುವಂತೆ ಕರೆದಿದ್ದರು. ಅಕ್ಟೋಬರ್ 2001 ರಲ್ಲಿ ನಡೆದ ಈ ಮಹತ್ವದ ಬೆಳವಣಿಗೆಯನ್ನು ವಿಜಯ್ ತ್ರಿವೇದಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಮೋದಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಚುನಾವಣೆ ಉಸ್ತುವಾರಿ ಹೊಣೆ ಹೊತ್ತಿದ್ದರು. ಆದ್ರೆ ಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಬೇಕಾಯ್ತು. ಸೋಲಿನ ಹೊಣೆ ಹೊತ್ತ ಮೋದಿ ಅಮೆರಿಕಾಕ್ಕೆ ತೆರಳಿದ್ದರು. ಅಟಲ್ ಬಿಹಾರಿ ವಾಜಪೇಯಿ ಕೂಡ ಅಮೆರಿಕಾಕ್ಕೆ ಹೋಗಿದ್ದ ವೇಳೆ ಇಬ್ಬರ ಭೇಟಿಯಾಗಿತ್ತು.

ಸೋಲಿನಿಂದ ಪಲಾಯನ ಮಾಡದಂತೆ ವಾಜಪೇಯಿ ಸಲಹೆ ನೀಡಿದ್ದರು. ದೆಹಲಿಗೆ ವಾಪಸ್ ಬರುವಂತೆ ಸೂಚಿಸಿದ್ದರು. ಇದಕ್ಕೆ ಮೋದಿ ಒಪ್ಪಿಗೆ ನೀಡಿದ್ದರಿಂದಲೇ ಇಂದು ಅವರ ಹಣೆ ಬರಹ ಬದಲಾಗಿದೆ. ಆಗ ಕೇಶುಭಾಯಿ ರಾಜೀನಾಮೆ ನೀಡಿದ್ರು. ನರೇಂದ್ರ ಮೋದಿ ಆ ಸ್ಥಾನಕ್ಕೇರಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...