alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಬೇವಿನ ಮರವೇ ರೋಗಿಗಳ ಪಾಲಿಗೆ ಆಸ್ಪತ್ರೆ

TREE HOSPITALಬೇವಿನ ಮರ ಆರೋಗ್ಯಕ್ಕೆ ಒಳ್ಳೆಯದು. ರಾಜಸ್ತಾನದ ಢೋಲ್ಪುರ ಜಿಲ್ಲೆಯ ಸೈಪೌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೇವಿನ ಮರವೇ ರೋಗಿಗಳ ಆವಾಸ ಸ್ಥಾನ.

ಆಸ್ಪತ್ರೆ ಆವರಣದಲ್ಲಿರುವ 2 ಬೇವಿನ ಮರಗಳ ಸುತ್ತ ಜ್ವರಪೀಡಿತರನ್ನೆಲ್ಲ ಮಲಗಿಸಲಾಗುತ್ತೆ. ಗ್ಲುಕೋಸ್ ಬಾಟಲಿಗಳನ್ನೆಲ್ಲ ಮರದ ಕಾಂಡಕ್ಕೆ ತಗುಲಿ ಹಾಕಿ ಕೆಳಗೆ ಮಲಗಿರುವ ರೋಗಿಗಳಿಗೆ ಕೊಡಲಾಗುತ್ತೆ. ಅಲ್ಲೇ ಹತ್ತಿರದಲ್ಲಿರುವ ಬೆಂಚಿನ ಮೇಲೆ ಕುಳಿತು ರೋಗಿಗಳ ಸಂಬಂಧಿಕರು ಗ್ಲುಕೋಸ್ ಹರಿವಿನ ಮೇಲೆ ನಿಗಾ ಇಡಬೇಕು.

ಬೇವಿನ ಮರ ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ಹೀಗೆ ಮಾಡ್ತಿದ್ದಾರೆ ಅಂದ್ಕೋಬೇಡಿ. ರೋಗಿಗಳ ಸಂಖ್ಯೆ ಮಿತಿ ಮೀರಿರುವುದರಿಂದ ಆರೋಗ್ಯ ಕೇಂದ್ರದಲ್ಲಿ ಜಾಗವಿಲ್ಲದೆ ಮರದ ಅಡಿಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಆಸ್ಪತ್ರೆಯಲ್ಲಿರೋದು ಕೇವಲ 15 ಹಾಸಿಗೆ, ಮುಂಗಾರಿನಲ್ಲಿ ರೋಗಿಗಳ ಸಂಖ್ಯೆ ಹೆಚ್ಚು. ಪ್ರತಿನಿತ್ಯ 200 ರೋಗಿಗಳು ಬರುತ್ತಾರೆ.

ಆಗೆಲ್ಲ ಎರಡು ಬೇವಿನ ಮರಗಳು ಆಸ್ಪತ್ರೆಯ ವಾರ್ಡ್ ಆಗಿ ಬದಲಾಗುತ್ತವೆ. ಪ್ರತಿ ಮರದ ಕೆಳಗೆ 15-20 ರೋಗಿಗಳು ಮಲಗಿರ್ತಾರೆ. ಈ ಆರೋಗ್ಯ ಕೇಂದ್ರದಲ್ಲಿರುವವರು ಮೂರೇ ವೈದ್ಯರು, ಔಷಧಿಯ ಕೊರತೆಯೂ ಇದೆ. ನೈರ್ಮಲ್ಯದ ಕೊರತೆ ಕೂಡ ಮತ್ತೊಂದು ಸಮಸ್ಯೆ, ರೋಗಿಗಳ ಸಂಖ್ಯೆ ವಿಪರೀತವಾಗಿರೋದ್ರಿಂದ ಬಹಿರಂಗ ಬಹಿರ್ದೆಸೆಯೂ ಕಾಮನ್ ಆಗ್ಬಿಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...