alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯ ಸೆಲ್ಫಿಗೆ ಮಾತ್ರ ಸೀಮಿತ 2000 ರೂ. ನೋಟು..!

selfie

500 ಮತ್ತು 1000 ರೂಪಾಯಿ ನೋಟುಗಳ ನಿಷೇಧದ ನಂತರ ಬ್ಯಾಂಕ್ ಗಳಲ್ಲಿ ಮತ್ತು ಎಟಿಎಂಗಳಲ್ಲಿ ಹೊಸ ನೋಟು ಸಿಕ್ತಾ ಇದೆ. ಆದ್ರೆ 2000 ರೂಪಾಯಿ ಮುಖಬೆಲೆಯ ನೋಟು ಮಾತ್ರ ಸೆಲ್ಫಿಗೆ ಸೀಮಿತ ಎನ್ನುವಂತಾಗಿದೆ.

ಹೊಸ ನೋಟು ಸಿಕ್ಕ ಖುಷಿಯಲ್ಲಿ ಸೆಲ್ಫಿ ತೆಗೆದುಕೊಳ್ಳಬಹುದು, ಆದ್ರೆ ಅದನ್ನು ಖರ್ಚು ಮಾಡೋದಂತೂ ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಇದೆ. ಯಾಕಂದ್ರೆ 2000 ರೂಪಾಯಿಗೆ ಎಲ್ಲೂ ಚಿಲ್ಲರೆ ಸಿಕ್ತಾ ಇಲ್ಲ. ಪೆಟ್ರೋಲ್ ಬಂಕ್, ಮೆಡಿಕಲ್ ಶಾಪ್ ಎಲ್ಲಿ ಹೋದ್ರೂ ಇದೇ ಕಥೆ. 100 ರೂಪಾಯಿ ಪೆಟ್ರೋಲ್ ಹಾಕಿಸ್ಕೊಂಡು 2000 ರೂಪಾಯಿಗೆ ಚೇಂಜ್ ಕೇಳಿದ್ರೆ ಎಲ್ಲಿಂದ ತರೋದು ಅನ್ನೋದು ಬಂಕ್ ಸಿಬ್ಬಂದಿಯ ಪ್ರಶ್ನೆ.

ಶಾಪಿಂಗ್ ಮಾಲ್ ಗಳಂತೂ ನೋಟಿನ ಸಹವಾಸವೇ ಬೇಡ ಅಂತಾ ಗ್ರಾಹಕರ ಬಳಿ ಕಾರ್ಡ್ ಸ್ವೈಪ್ ಮಾಡಿ ಎನ್ನುತ್ತಿವೆ. ಉಬರ್, ಓಲಾ ಕೂಡ 100, 50ರ ನೋಟುಗಳನ್ನು ಮಾತ್ರ ಸ್ವೀಕರಿಸುತ್ತಿವೆ. ಇಲ್ಲವಾದ್ರೆ ಎಲೆಕ್ಟ್ರಾನಿಕ್ ವಾಲೆಟ್ ಮೂಲಕ ಹಣ ಪಾವತಿಸುವಂತೆ ಮನವಿ ಮಾಡಿವೆ. ಇನ್ನು ಎಟಿಎಂಗಳಲ್ಲಂತೂ ಹಣ ಭರ್ತಿ ಮಾಡಿ ಕೇವಲ ಒಂದು ಗಂಟೆಯಲ್ಲೇ ಪೂರ್ತಿ ಖಾಲಿಯಾಗ್ತಾ ಇದೆ. ಹಾಗಾಗಿ ಚಿಲ್ಲರೆ ಸಮಸ್ಯೆಯಿಂದಾಗಿ 2000 ಹೊಸ ನೋಟು ಇದ್ದರೂ ಕೈಯಲ್ಲಿ ಹಣವಿಲ್ಲ ಎನ್ನುವಂತಹ ಪರಿಸ್ಥಿತಿ ಜನಸಾಮಾನ್ಯರದ್ದು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...