alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಬಿರುಗಾಳಿ ಮಳೆಯಿಂದ ತಾಜ್ ಮಹಲ್ ಪ್ರವೇಶ ದ್ವಾರಕ್ಕೆ ಹಾನಿ

ಆಗ್ರಾದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಾಜ್ ಮಹಲ್ ನ ಪ್ರವೇಶ ದ್ವಾರಕ್ಕೆ ಹಾನಿಯಾಗಿದೆ. ಸ್ತಂಭ ಗೋಪುರವೊಂದು ಕುಸಿದು ಬಿದ್ದಿದೆ.

ಎಂಟ್ರಿ ಗೇಟ್ ನಲ್ಲಿ 12 ಅಡಿ ಎತ್ತರದ ಲೋಹದ ಕಂಭವನ್ನು ಅಳವಡಿಸಲಾಗಿತ್ತು. ಇದನ್ನು ದರ್ವಾಜಾ ಇ ರೌಜಾ ಎಂದು ಕರೆಯಲಾಗುತ್ತಿತ್ತು. ಸುಮಾರು 100 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಿದ್ದರಿಂದ ಈ ಅನಾಹುತ ಸಂಭವಿಸಿದೆ. ಮಧ್ಯರಾತ್ರಿಯ ಬಳಿಕ ಸ್ತಂಭಗೋಪುರ ಉರುಳಿ ಬಿದ್ದಿದ್ದು, ಚೂರು ಚೂರಾಗಿ ಹೋಗಿದೆ.

ಈ ಮಧ್ಯೆ ತಾಜ್ ಮಹಲ್ ಮಾಲೀಕತ್ವಕ್ಕಾಗಿ ಜಟಾಪಟಿ ಶುರುವಾಗಿದ್ದು, ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ತಾಜ್ ಮಹಲ್ ತಮಗೆ ಸೇರಿದ ಆಸ್ತಿ ಅಂತಾ ವಕ್ಫ್ ಮಂಡಳಿ ಹೇಳುತ್ತಿದೆ. ಈ ಬಗ್ಗೆ ಮೊಘಲ್ ದೊರೆ ಶಹಜಹಾನ್ ಸಹಿ ಮಾಡಿದ ದಾಖಲೆ ತೋರಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದ ಸುನ್ನಿ ವಕ್ಫ್ ಬೋರ್ಡ್ ಗೆ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...