alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಸಹೋದರಿಯ ಮನೆ ದೋಚಿದ ಕೆಲಸದಾಕೆ

robbery_1471932839

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಕಳ್ಳತನವಾಗಿದೆ. ಸುಮಾರು 3.50 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಹಾಗೂ ನಗದು ಕಾಣೆಯಾಗಿದೆ. ಅರ್ಪಿತಾ ಕುಟುಂಬದವರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ಶುರುಮಾಡಿದ ಪೊಲೀಸರು ಅರ್ಪಿತಾ ಮನೆ ಕೆಲಸದಾಕೆಯನ್ನು ಬಂಧಿಸಿದ್ದಾರೆ. 35 ವರ್ಷದ ಆಸ್ಫಾ ಖಾನ್, ಅರ್ಪಿತಾ ಮನೆಯಲ್ಲಿ ಅನೇಕ ದಿನಗಳಿಂದ ಕೆಲಸ ಮಾಡ್ತಿದ್ದಳು. ಕೆಲ ದಿನಗಳ ಹಿಂದಷ್ಟೆ ರಜೆ ತೆಗೆದುಕೊಂಡು ಹೋಗಿದ್ದಳು. ಚಾಲಕ ಹಾಗೂ ಪಕ್ಕದ ಫ್ಲಾಟ್ ನಲ್ಲಿ ಕೆಲಸ ಮಾಡುವವರ ವಿಚಾರಣೆ ನಡೆಸಿದ ಪೊಲೀಸರು ಕೆಲಸದಾಕೆಯನ್ನು ವಶಕ್ಕೆ ಪಡೆದಿದ್ದಾರೆ.

ಅರ್ಪಿತಾ ಡಿಸೈನರ್ ಬಟ್ಟೆ ಕೂಡ ಕಳ್ಳತನವಾಗಿದೆಯಂತೆ. ಪಶ್ಚಿಮ ಬಾಂದ್ರಾದ ಪೆಸಿಫಿಕ್ ಹೈಟ್ಸ್ ನಲ್ಲಿ ಅರ್ಪಿತಾ ವಾಸವಾಗಿದ್ದಾಳೆ. 2014 ರಲ್ಲಿ ಹಿಮಾಚಲ ಪ್ರದೇಶದ ಆಯುಶ್ ಶರ್ಮಾನನ್ನು ಮದುವೆಯಾಗಿದ್ದಳು. ಮಾರ್ಚ್ ನಲ್ಲಷ್ಟೇ ಮಗುವಿಗೆ ಜನ್ಮ ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...