alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಸಂಗೀತವೇ ಉಸಿರು, ರಾಗದಲ್ಲೇ ಹೆಸರು…!

ಮೇಘಾಲಯದ ಈ ಹಳ್ಳಿಯಲ್ಲಿ ಯಾರೂ ಯಾರನ್ನೂ ನಿಜ ಹೆಸರಲ್ಲಿ ಕೂಗಿ ಕರೆಯುವುದಿಲ್ಲ. ಎಲ್ಲರ ಹೆಸರಿಗೂ ಒಂದೊಂದು ರಾಗ ಇರುತ್ತದೆ. ಹುಟ್ಟುವಾಗಲೇ ತಾಯಿ ತನ್ನ ಮಗುವನ್ನು ಯಾವ ರಾಗದಲ್ಲಿ ಕರೆಯುತ್ತಾಳೋ ಅದೇ ರಾಗ ಆ ಮಗುವಿಗೆ ಶಾಶ್ವತವಾಗಿ ಬಿಡುತ್ತದಂತೆ. ಎಷ್ಟೋ ಬಾರಿ ಸಂಭಾಷಣೆಗಳೂ ರಾಗದಲ್ಲೇ ಆಗುತ್ತವಂತೆ ನಂಬುವುದು ತುಸು ಕಷ್ಟವೇ. ಆದರೂ ಇದು ನಿಜ.

ಕಾಂಗ್ ಥೋಂಗ್ ಎಂಬ ಹಳ್ಳಿಯ ಖಾಸಿ ಬುಡಕಟ್ಟು ಜನಾಂಗದವರಲ್ಲಿ ಜನಪದ ಸಂಗೀತ ಹಾಸುಹೊಕ್ಕಾಗಿದೆ. ಹೀಗೊಂದು ಪರಿಪಾಠ ಯಾವಾಗ ಎಲ್ಲಿ, ಹೇಗೆ ಹುಟ್ಟಿಕೊಂಡಿತು ಎಂಬ ಪ್ರಶ್ನೆ ಕೇಳಿದರೆ ಅವರಿಗೂ ಗೊತ್ತಿಲ್ಲ. ಕಾಡಿನ ಮಧ್ಯೆ ನಮ್ಮ ಪ್ರಪಂಚವಾಗಿದ್ದರಿಂದ ಹಕ್ಕಿಗಳ ನುಡಿಗಳೆವೂ ನಮಗೆ ಗೊತ್ತು. ಈ ಒಡನಾಟ ನಮ್ಮೊಳಗೂ ನೆಲೆ ನಿಂತಿರಬಹುದೆಂದು ಹೇಳುತ್ತಾರೆ.

ಹತ್ತಾರು ಮಕ್ಕಳ ಮಧ್ಯೆ ಆಡುತ್ತಿರುವ ಕಂದನನ್ನು ತಾಯಿ ರಾಗದಲ್ಲೇ ಕರೆಯುತ್ತಾಳೆ. ಆ ರಾಗ ನನ್ನ ಅಮ್ಮನದ್ದು ಮತ್ತು ನನ್ನನ್ನೇ ಕರೆದದ್ದು ಎಂದು ಖಚಿತಪಡಿಸಿಕೊಳ್ಳುವ ಮಗು ತಕ್ಷಣ ತನ್ನ ತಾಯಿಯ ಬಳಿಗೆ ತಲುಪುತ್ತದೆ. ಇದು ಪ್ರೀತಿಯ ಸಂಕೇತ.

ಅಪರೂಪಕ್ಕೆ ನಿಜ ನಾಮಧೇಯದಲ್ಲಿ ಕರೆಯುವುದೂ ಇದೆ. ಹಾಗೆ ಕರೆದಾಗ ಮಗುವಿಗೂ ಅರ್ಥವಾಗುತ್ತದೆ. ತಾಯಿ ಕೋಪಿಸಿಕೊಂಡಿದ್ದಾಳೆ ಎಂದು. ಒಟ್ಟಾರೆ ಈ ಸಂಗೀತದ ಸಂಭಾಷಣೆ ನೋಡುವುದೇ ಚಂದ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...