alex Certify
ಕನ್ನಡ ದುನಿಯಾ       Mobile App
       

Kannada Duniya

ಆನೆಗಳ ಕುಟುಂಬಕ್ಕೆ ಇಲ್ಲಿ ಸಿಕ್ತಿದೆ ‘ರಾಜ ವೈಭೋಗ’…!

ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಅಭಯಾರಣ್ಯ ಆನೆಗಳು ಈಗ ಒಂದು ವಾರದ ಪಿಕ್ನಿಕ್ ಪ್ಯಾಕೇಜ್ ನ ವೈಭೋಗವನ್ನು ಅನುಭವಿಸುತ್ತಾ ಸಖತ್ ಖುಷಿಯಲ್ಲಿವೆ. ಬೆಳಗಾದ್ರೆ ಅಭಯಾರಣ್ಯದ ಆನೆಗಳ ಹಿಂಡಿಗೆ ನಿತ್ಯ ಅಭ್ಯಂಜನ ಸ್ನಾನ ಮಾಡಿಸಲಾಗ್ತಿದೆ. ಹೊತ್ತು ಹೊತ್ತಿಗೆ ಸರಿಯಾಗಿ ಇಷ್ಟದ ಆಹಾರ ನೀಡಲಾಗ್ತಿದೆ. ಏಳು ದಿನಗಳ ಈ ವಿಶೇಷ ಪ್ಯಾಕೇಜ್ ಟ್ರಿಪ್ ನ ಸರ್ವ ಸುಖವನ್ನು ಗಜಪಡೆಗಳು ಸಖತ್ತಾಗಿಯೇ ಅನುಭವಿಸ್ತಿವೆ.

ಇದೇನಪ್ಪಾ ಆನೆಗಳಿಗೆ ಇಷ್ಟೊಂದು ಸೇವೆನಾ ಅಂತ ನಿಮಗೆ ಅನ್ನಿಸಬಹುದು. ಮಧ್ಯಪ್ರದೇಶದಲ್ಲಿ ಪ್ರತಿ ವರ್ಷ ಕ್ನಹಾ ಅಭಯಾರಣ್ಯದಲ್ಲಿ ಒಂದು ವಾರ ಆನೆಗಳ ಪರಿವಾರಕ್ಕೆ ಪಿಕ್ನಿಕ್ ಪ್ಯಾಕೇಜ್ ನ ಮೆಗಾ ಫೆಸ್ಟ್ ಆಯೋಜನೆ ಮಾಡಲಾಗುತ್ತದೆ. ಆನೆಗಳಿಗೆ ವಿಶೇಷ ಕಾಳಜಿ ತೋರಿಸೋ ಕೆಲಸವನ್ನು ಈ ಮೂಲಕ ಅಭಯಾರಣ್ಯದ ಅಧಿಕಾರಿಗಳು ಮಾಡ್ತಾರೆ. ವಿಶೇಷ ಆಹಾರದಿಂದ ಹಿಡಿದು ಆಯಿಲ್ ಮಸಾಜ್ ನಂತ ಸೇವೆಗಳನ್ನ ಆನೆಗಳಿಗೆ ನೀಡಲಾಗುತ್ತದೆ. ಈ ಬಾರಿಯೂ ಅಂತದ್ದೇ ಅನುಕೂಲವನ್ನು ಆನೆಗಳಿಗಾಗಿ ಕಲ್ಪಿಸಲಾಗಿದೆ.

ಇಷ್ಟೇ ಅಲ್ಲ ಆನೆಗಳಿಗಾಗಿ ಮೆಡಿಕಲ್ ಚೆಕಪ್ ಕೂಡ ಇಲ್ಲಿ ನಡೆಯುತ್ತದೆ. ವೈದ್ಯರ ವರದಿಯ ಆಧಾರದ ಮೇಲೆ ಆನೆಗಳಿಗೆ ಡಯಟ್ ಮೆನು ಪ್ರಕಾರ ಆಹಾರ ನೀಡಲಾಗುತ್ತದೆ. ಆನೆಗಳ ಫ್ಯಾಮಿಲಿ ಪಿಕ್ ನಿಕ್ ನ ಮಜವಾದ ವಿಡಿಯೋ ಈಗ ಆನ್ಲೈನ್ ನಲ್ಲಿ ಮಿಂಚು ಹರಿಸಿದೆ. ಅಭಯಾರಣ್ಯದ ಅಧಿಕಾರಿಗಳ ಸೇವೆಗೆ ಜನರಿಂದ ಮೆಚ್ಚುಗೆಯೂ ವ್ಯಕ್ತವಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...