alex Certify
ಕನ್ನಡ ದುನಿಯಾ       Mobile App
       

Kannada Duniya

‘ಗೋವಾ, ಪಂಜಾಬ್ ನಲ್ಲಿ ಆಪ್ ಜಯಭೇರಿ’

aap-wi

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ್, ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.

40 ವಿಧಾನಸಭೆ ಕ್ಷೇತ್ರಗಳಿರುವ ಗೋವಾ ಮತ್ತು 117 ಕ್ಷೇತ್ರಗಳಿರುವ ಪಂಜಾಬ್ ರಾಜ್ಯಗಳಿಗೆ ಫೆಬ್ರವರಿ 4 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಗೋವಾ ಹಾಗೂ ಪಂಜಾಬ್ ರಾಜ್ಯಗಳ ಚುನಾವಣೆಯನ್ನು ಒಂದೇ ದಿನಾಂಕದಂದು ನಡೆಸದಂತೆ, ಆಮ್ ಆದ್ಮಿ ಪಾರ್ಟಿ ಮನವಿ ಮಾಡಿತ್ತು. ಆದರೂ, ಒಂದೇ ದಿನ ನಿಗಧಿಪಡಿಸಿದ್ದು, ಎರಡೂ ರಾಜ್ಯಗಳಲ್ಲಿ ನಮ್ಮ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಆಪ್ ಮುಖಂಡ ಆಶುತೋಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 4 ರಂದು ಗೋವಾ, ಪಂಜಾಬ್ ರಾಜ್ಯಗಳಿಗೆ ಚುನಾವಣೆ ನಡೆಯಲಿದೆ. ಇದಕ್ಕಿಂತ 3 ದಿನ ಮೊದಲು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಆಕ್ಷೇಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...