alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಚಕ್ಕಂದವಾಡಿದ ಶಿಕ್ಷಕನ ಫೋಟೋ

asom-tecr

ಕಾಟ್ಲಿಚೆರಾ: ಆಘಾತಕಾರಿ ಘಟನೆಯೊಂದರಲ್ಲಿ ತರಗತಿಯಲ್ಲೇ ವಿದ್ಯಾರ್ಥಿನಿಯೊಂದಿಗೆ ಚಕ್ಕಂದವಾಡಿದ ಶಿಕ್ಷಕನೊಬ್ಬ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.

ಫೋಟೋಗಳು ವೈರಲ್ ಆಗಿದ್ದು, ಘಟನೆ ಬೆಳಕಿಗೆ ಬರುತ್ತಲೇ ಆರೋಪಿ ಶಿಕ್ಷಕನನ್ನು ಅರೆಸ್ಟ್ ಮಾಡಲಾಗಿದೆ. ಅಸ್ಸಾಂನ ಹೈಲಂಕಾಡಿ ಜಿಲ್ಲೆಯ ಮಾಡೆಲ್ ಹೈಸ್ಕೂಲ್ ಒಂದರ ಶಿಕ್ಷಕ ಫೈಜುದ್ದೀನ್ ಲಸ್ಕರ್ ಇಂತಹ ಕೃತ್ಯ ಎಸಗಿದವ.

ವಿದ್ಯಾರ್ಥಿನಿಯೊಂದಿಗೆ ಅಶ್ಲೀಲ ಭಂಗಿಯಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. ಇವು ವೈರಲ್ ಆಗಿದ್ದು, ಅಸ್ಸಾಂ ವಿರೋಧ ಪಕ್ಷದ ನಾಯಕರಾದ ದೇವವ್ರತಾ ಸೈಕಿಯವರು ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇಂತಹ ಘಟನೆಗಳು ದುರದೃಷ್ಟಕರವಾಗಿದ್ದು, ಘಟನೆ ಬೆಳಕಿಗೆ ಬಂದರೂ ಶಿಕ್ಷಕನ ವಿರುದ್ಧ ಕ್ರಮ ಕೈಗೊಂಡಿಲ್ಲ. ಇಂತಹ ಪ್ರಕರಣಗಳಿಂದ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಾರೆ ಎಂದಿದ್ದಾರೆ.

ಕೊನೆಗೆ ಶಿಕ್ಷಕನನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...