alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಷಕರನ್ನು ನಿರ್ಲಕ್ಷಿಸುವ ನೌಕರರಿಗೆ ಶಾಕ್ ಕೊಟ್ಟ ಸರ್ಕಾರ

ಗುವಾಹಟಿ: ಸರಕಾರಿ ನೌಕರರು ತಮ್ಮ ಜತೆಗಿರುವ ಪೋಷಕರನ್ನು ಹಾಗೂ ವಿಶೇಷ ಚೇತನರಾಗಿರುವ ಸಹೋದರಿಯರನ್ನು ಸರಿಯಾಗಿ ನೋಡಿಕೊಳ್ಳದೇ ಹೋದಲ್ಲಿ ವೇತನ ಕಡಿತಗೊಳಿಸುವ ಹೊಸ ನಿಯಮವನ್ನು ಅಸ್ಸಾಂ ಸರಕಾರ ಜಾರಿಗೊಳಿಸಲಿದೆ. ಈ ವರ್ಷದ ಗಾಂಧಿ ಜಯಂತಿ(ಅ.2) ರಿಂದ ಈ ನಿಯಮ ಜಾರಿಯಾಗಲಿದೆ.

ಸರಕಾರಿ ನೌಕರರ ಪೋಷಕರು, ಬೇರೆ ಆದಾಯದ ಮೂಲ ಇಲ್ಲದೇ ಇದ್ದಲ್ಲಿ, ಅವರನ್ನು ನೌಕರರು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಬೇಕು. ಅಂತೆಯೇ ನೌಕರರಿಗೆ ವಿಶೇಷ ಚೇತನವಾಗಿರುವ ಸಹೋದರಿ ಇದ್ದಲ್ಲಿ ಅವರ ಆರೈಕೆ ಸರಿಯಾದ ರೀತಿಯಲ್ಲಿ ಮಾಡಬೇಕು. ನೌಕರರು ಸರಿಯಾಗಿ ಆರೈಕೆ ಮಾಡದೇ ಇದ್ದಲ್ಲಿ, ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ ಎಂದು ಹಣಕಾಸು ಸಚಿವ ಹಿಮಾಂತ ಬಿಸ್ವಾಸ್ ಹೇಳಿದ್ದಾರೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ಅಸ್ಸಾಂ ಸರಕಾರ ಇಂತಹ ನಿಯಮ ಜಾರಿಗೊಳಿಸಿದ ಮೊದಲ ರಾಜ್ಯವಾಗಿದೆ. ಅಸ್ಸಾಂ ನೌಕರರ ಪೋಷಕರ ಜವಾಬ್ದಾರಿ ಹೊಣೆಗಾರಿಕೆಗಳ ಕಾಯ್ದೆ 2017 ನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಂಡಿಸಲಾಗಿತ್ತು. ನಿಯಮಗಳನ್ನು ರೂಪಿಸಿ, ಕ್ಯಾಬಿನೆಟ್‌ನಲ್ಲಿ ಸೋಮವಾರ ಅನುಮತಿ ಪಡೆಯಲಾಗಿದೆ. ಅ.2 ರಿಂದ ನಿಯಮ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...