alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹದ ಅಬ್ಬರಕ್ಕೆ ಕಾಜಿರಂಗ ಪಾರ್ಕ್ ಜಲಾವೃತ

flood

ಗುವಾಹಟಿಯ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಪ್ರವಾಹದ ಹೊಡೆತಕ್ಕೆ ತತ್ತರಿಸಿ ಹೋಗಿದೆ. ಉದ್ಯಾನವನದ 858 ಕಿಮೀ ಚದರಡಿ ಪ್ರದೇಶ ಈಗಾಗ್ಲೇ ನೀರಿನಿಂದ ಆವೃತವಾಗಿದೆ. ತಗ್ಗು ಪ್ರದೇಶಗಳು ಕೂಡ ಜಲಾವೃತವಾಗಿದ್ದು, ಪ್ರಾಣಿಗಳೆಲ್ಲ ಬೆಟ್ಟದತ್ತ ಸಾಗುತ್ತಿವೆ.

ಪ್ರವಾಹದ ನೆಪ ಮಾಡಿಕೊಂಡು ಬೇಟೆಗಾರರು ಪ್ರಾಣಿಗಳನ್ನು ಕೊಲ್ಲುವ ಸಾಧ್ಯತೆಯಿರೋದ್ರಿಂದ ಭದ್ರತೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ 100 ಫಾರೆಸ್ಟ್ ಗಾರ್ಡ್ ಗಳನ್ನು ಪ್ರಾಣಿಗಳ ರಕ್ಷಣೆಗಾಗಿಯೇ ನೇಮಕ ಮಾಡಲಾಗಿದೆ. ನಾರ್ತ್ ಕ್ಯಾಚರ್ ಹಿಲ್ಸ್ ನಲ್ಲಿ ಭೂಕುಸಿತ ಕೂಡ ಸಂಭವಿಸಿದೆ. ಇದ್ರಿಂದಾಗಿ ರೈಲುಗಳ ಸಂಚಾರವೂ ಅಸ್ತವ್ಯಸ್ತವಾಗಿದೆ.

flood

ಬ್ರಹ್ಮಪುತ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜೋರ್ಹತ್ ನಿಂದ ಮಜುಲಿಗೆ ದೋಣಿ ಸಂಚಾರವನ್ನು ಕೂಡ ನಿಷೇಧಿಸಲಾಗಿದೆ. ಲಖಿಂಪುರ, ಜೋರ್ಹತ್ ಹಾಗೂ ಬಿಸ್ವಂತ್ ಜಿಲ್ಲೆಯ 28 ಗ್ರಾಮಗಳು ಪ್ರವಾಹದ ಅಬ್ಬರಕ್ಕೆ ಜಲಾವೃತವಾಗಿವೆ. ಸುಮಾರು 30,000 ಜನರು ಅತಂತ್ರರಾಗಿದ್ದಾರೆ.

ಪ್ರವಾಹ ಪೀಡಿತ ಗ್ರಾಮಗಳಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗ್ತಿದೆ. ಸೇನೆ ಕೂಡ ಜಿಲ್ಲಾಡಳಿತಕ್ಕೆ ಸಾಥ್ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...