alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಹಾಡಹಗಲೇ ನಡೆದ ಘೋರ ಕೃತ್ಯ

stab

ದೆಹಲಿಯಲ್ಲಿ ಹಾಡಹಗಲೇ ಯುವತಿಯೊಬ್ಬಳಿಗೆ ಚಾಕುವಿನಿಂದ ಇರಿದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆಕೆಯ ಮನೆಯೆದುರೇ ಈ ಕೃತ್ಯ ನಡೆದಿದ್ದು, 21 ವರ್ಷದ ಯುವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಮಂಗಳವಾರ 5 ಗಂಟೆ ವೇಳೆಗೆ ಈ ಕೃತ್ಯ ನಡೆದಿದೆ.

ವ್ಯಕ್ತಿಯೊಬ್ಬ ಆಕೆಯ ಜೊತೆಗೆ ಜಗಳ ಮಾಡುತ್ತಿದ್ದ. ನಂತರ ಚಾಕುವನ್ನು ಅವಳ ಹೊಟ್ಟೆಗೆ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಪಕ್ಕದ ಮನೆಯ ಸಿಸಿ ಟಿವಿಯಲ್ಲಿ ಈ ಹತ್ಯೆಯ ದೃಶ್ಯ ರೆಕಾರ್ಡ್ ಆಗಿದೆ. ಹಂತಕನ ಮೇಲೆ ಕಾರ್ ಕಳವು ಸೇರಿದಂತೆ ಈ ಹಿಂದೆಯೂ ಹಲವು ಪ್ರಕರಣಗಳಿದ್ದವು ಅಂತಾ ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಆದಿಲ್ ಅಂತಾ ಮೃತ ಯುವತಿಯ ಹೆತ್ತವರು ಗುರುತಿಸಿದ್ದಾರೆ. ಕಳೆದ ಒಂದು ವರ್ಷದಿಂದ ಆತ ತನ್ನನ್ನು ಪ್ರೀತಿಸುವಂತೆ ಅವಳನ್ನು ಪೀಡಿಸುತ್ತಿದ್ದ. ಹತ್ಯೆ ನಡೆದ ದಿನ ಆತ ದೆಹಲಿಯಿಂದ ಬೇರೆಡೆಗೆ ತೆರಳಿದ್ದ, ಪೊಲೀಸರನ್ನು ಯಾಮಾರಿಸಲು ಅದೇ ದಿನ ವಾಪಸ್ಸಾಗಿದ್ದಾನೆ. ಆತನ ಮೊಬೈಲ್ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...