alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟಂಟ್ ಕಲಿಯಲು ಬೈಕ್ ಕದಿಯುತ್ತಿದ್ದವರ ಅರೆಸ್ಟ್

ನವದೆಹಲಿ: ಬಾಲಿವುಡ್ ನಲ್ಲಿ ಸ್ಟಂಟ್ ಮೆನ್ ಆಗಬೇಕೆಂದು ಕನಸು ಹೊತ್ತ ಇಬ್ಬರು ಯುವಕರು ಅದನ್ನು ಕಲಿಯಲು ಐಷಾರಾಮಿ ಬೈಕುಗಳಿಗೆ ಕನ್ನ ಹಾಕಿ ಸಿಕ್ಕಿಬಿದ್ದಿದ್ದಾರೆ.

ದೆಹಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಿದಾಗ, ಅವರಿಬ್ಬರು 10 ಬೈಕ್ ಪ್ರಕರಣದಲ್ಲಿ ಭಾಗಿಯಾಗಿದ್ದು, ಬೆಳಕಿಗೆ ಬಂದಿದೆ.

ಬಾಲಿವುಡ್ ಸಿನಿಮಾಗಳಲ್ಲಿ ಸ್ಟಂಟ್ ಮೆನ್ ಆಗಬೇಕೆಂಬ ಕಾರಣಕ್ಕೆ ಬೈಕ್ ಗಳನ್ನು ಕದಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬೈಕರ್ ತಂಡದ ಸದಸ್ಯರಾಗಿ ಆ ಯುವಕರು ಬೈಕರ್ ಮತ್ತು ರೈಡರ್ ಎಂದು ಗುರುತಿಸಿಕೊಂಡಿದ್ದರು.

ಅಪರಾಧ ನಿರ್ಬಂಧಗೊಳಿಸುವ ತಾಲೀಮು ನಡೆಸುತ್ತಿದ್ದ ಪೊಲೀಸರು ಕಳ್ಳರನ್ನು ಪತ್ತೆ ಮಾಡಲು ವಿಶೇಷ ನಿಗಾ ವಹಿಸಿದ್ದರು. ಅನೇಕ ಮಾಹಿತಿದಾರರನ್ನು ನಿಯೋಜಿಸಿ ಮಾಹಿತಿ ಕಲೆ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಕಳ್ಳತನ ಪ್ರಕರಣ ಬಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...