alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಾಟ್ ಖಾಲಿ ಮಾಡು ಅಂದಿದ್ದಕ್ಕೆ ಈಕೆ ಮಾಡಿದ್ದೇನು..?

c2_1a

ಮಹಾರಾಷ್ಟ್ರದ ಪುಣೆಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮಾಲೀಕ ಫ್ಲಾಟ್ ಖಾಲಿ ಮಾಡುವಂತೆ ಹೇಳಿದ್ದರಿಂದ ಆಕ್ರೋಶಗೊಂಡ 28 ವರ್ಷದ ಮಹಿಳೆಯೊಬ್ಬಳು ಇತರೆ ಬಾಡಿಗೆದಾರರ ಸುಮಾರು ಏಳೆಂಟು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾಳೆ.

ಹೀಗೆ ವಾಹನಗಳಿಗೆ ಬೆಂಕಿ ಹಚ್ಚಿದಾಕೆ ಶುಭಾಂಗಿ ದಿನಕರ್ ಪವಾರ್ ಎಂದು ಹೇಳಲಾಗಿದ್ದು, ಆಕೆಯ ವಿರುದ್ದ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆದಾರಳಾಗಿದ್ದ ಶುಭಾಂಗಿ, ಅಕ್ಕಪಕ್ಕದ ಇತರೆ ಬಾಡಿಗೆದಾರರೊಂದಿಗೆ ನಿತ್ಯ ಜಗಳವಾಡುತ್ತಿದ್ದಳೆನ್ನಲಾಗಿದೆ.

ಇದರಿಂದ ಬೇಸತ್ತ ಅವರುಗಳೆಲ್ಲರೂ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದು, ಮನೆ ಖಾಲಿ ಮಾಡುವಂತೆ ಶುಭಾಂಗಿಗೆ ಮನೆ ಮಾಲೀಕ ತಿಳಿಸಿದ್ದಾನೆ. ಇದರಿಂದ ಆಕ್ರೋಶಗೊಂಡಿದ್ದ ಶುಭಾಂಗಿ, ಮಧ್ಯರಾತ್ರಿ ಪಾರ್ಕಿಂಗ್ ಲಾಟ್ ಗೆ ತೆರಳಿ ಅಲ್ಲಿದ್ದ ಬಾಡಿಗೆದಾರರ ದ್ವಿ ಚಕ್ರ ವಾಹನಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಇದರಿಂದಾಗಿ ಏಳೆಂಟು ವಾಹನಗಳು ಭಸ್ಮವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸದಿದ್ದರೆ ಇನ್ನೂ ಹೆಚ್ಚಿನ ಅನಾಹುತವಾಗುತ್ತಿತ್ತು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...