alex Certify
ಕನ್ನಡ ದುನಿಯಾ       Mobile App
       

Kannada Duniya

ಲಷ್ಕರ್-ಇ-ತೋಯ್ಬಾ ಭಯೋತ್ಪಾದಕರಿಗೆ ಜೀವಾವಧಿ ಶಿಕ್ಷೆ

ಮುಂಬೈ ದಾಳಿಯ ರುವಾರಿ ಹಫೀಸ್ ಸಯೀದ್ ಸಂಘಟನೆ ಲಷ್ಕರ್ –ಇ-ತೋಯ್ಬಾದ 8 ಭಯೋತ್ಪಾದಕರಿಗೆ ಜೀವಾವಧಿ ಶಿಕ್ಷೆಯಾಗಿದೆ. ಜೈಪುರ ಕೋರ್ಟ್ ತಲಾ 11 ಲಕ್ಷ ರೂಪಾಯಿ ದಂಡದ ಜೊತೆ ಜೀವಾವಧಿ ಶಿಕ್ಷೆ ವಿಧಿಸಿದೆ. ದೇಶದಲ್ಲಿ ಹಿಂಸಾಚಾರ, ಗಲಭೆ ಎಬ್ಬಿಸಿದ ಹಾಗೂ ರಾಷ್ಟ್ರವಿರೋಧಿ ಚಟುವಟಿಕೆ ಪ್ರಕರಣದಲ್ಲಿ ಇವರನ್ನು ದೋಷಿಗಳೆಂದು ಪರಿಗಣಿಸಲಾಗಿದೆ.

ಇವರು ದೇಶದಲ್ಲಿ ಅಸ್ಥಿರತೆ ಹರಡ ಬಯಸಿದ್ದರು ಎಂದು ತೀರ್ಪಿನ ನಂತ್ರ ಕೋರ್ಟ್ ಹೇಳಿದೆ. ಪ್ರಕರಣದ ವಿಚಾರಣೆಯನ್ನು ನವೆಂಬರ್ 30ರಂದು ಪೂರ್ಣಗೊಳಿಸಿದ್ದ ಕೋರ್ಟ್ ಡಿಸೆಂಬರ್ 4ರಂದು ತೀರ್ಪು ನೀಡಬೇಕಿತ್ತು. ಆದ್ರೆ ಡಿಸೆಂಬರ್ 6ರಂದು ಪ್ರಕರಣ ತೀರ್ಪು ನೀಡಿದೆ. 8 ಮಂದಿ ಭಯೋತ್ಪಾದಕರನ್ನು ದೋಷಿ ಎಂದು ತೀರ್ಪಿತ್ತಿದೆ. ಆರ್ಥಿಕ ಕಾರಣ ನೀಡಿದ್ದ ಆರೋಪಿ ಪರ ವಕೀಲರು ಕಡಿಮೆ ಶಿಕ್ಷೆ ನೀಡುವಂತೆ ಕೋರ್ಟ್ ಗೆ ಹೇಳಿದ್ದರು. ರಾಷ್ಟ್ರದ ಭದ್ರತೆ ಸರ್ವಶ್ರೇಷ್ಠವಾದದ್ದು. ಹಾಗಾಗಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸರ್ಕಾರಿ ಪರ ವಕೀಲರು ವಾದ ಮಂಡಿಸಿದ್ದರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...