alex Certify
ಕನ್ನಡ ದುನಿಯಾ       Mobile App
       

Kannada Duniya

ಆಶಾ ಕಾರ್ಯಕರ್ತೆಯರನ್ನು ಮುಜುಗರಕ್ಕೀಡು ಮಾಡ್ತಿದೆ ಕಾಂಡೋಮ್ ಹೆಸರು

download-3

ಕಾಂಡೋಮ್ ನ ಹೊಸ ಹೆಸರು ಆಶಾ ಕಾರ್ಯಕರ್ತೆಯರನ್ನು ಮುಜುಗರಕ್ಕೀಡು ಮಾಡ್ತಾ ಇದೆ. ಕಾಂಡೋಮ್ ಹೆಸರು ಹೇಳಿ ಆಶಾ ಕಾರ್ಯಕರ್ತೆಯರನ್ನು ಹುಡುಗ್ರು ಲೇವಡಿ ಮಾಡ್ತಿದ್ದಾರಂತೆ. ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವ ಆಶಾ ಕಾರ್ಯಕರ್ತೆಯರು ಈ ಬಗ್ಗೆ ಹರ್ಯಾಣದ ಅಂಬಾಲ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ವಾಸ್ತವವಾಗಿ ಗ್ರಾಮೀಣ ಪ್ರದೇಶದಲ್ಲಿ ಕಾಂಡೋಮ್ ಹಂಚುವ ಕೆಲಸವನ್ನೂ ಆಶಾ ಕಾರ್ಯಕರ್ತೆಯರು ಮಾಡ್ತಿದ್ದಾರೆ. ಹಾಗೆ ಆಶಾ ಕಾಂಡೋಮ್ ಎಂದೇ ಕಾಂಡೋಮ್ ಗೆ ಹೆಸರಿಡಲಾಗಿದೆ. ಇದೇ ಕಾರ್ಯಕರ್ತೆಯರ ಮುಜುಗರಕ್ಕೀಡು ಮಾಡ್ತಾ ಇದೆ.

ಜಿಲ್ಲಾಧಿಕಾರಿ ಹಾಗೂ ಸಿಎಂಒಗೆ ಆಶಾ ಕಾರ್ಯಕರ್ತೆಯರು ಪತ್ರ ಬರೆದಿದ್ದಾರೆ. ಕಾಂಡೋಮ್ ಮೇಲಿರುವ ಆಶಾ ಹೆಸರನ್ನು ತೆಗೆದು ಹಾಕಿ. ಹಾಗೆ ಕಾಂಡೋಮ್ ವಿನಿಮಯ ಕಾರ್ಯವನ್ನು ಆಶಾ ಕಾರ್ಯಕರ್ತೆಯರಿಗೆ ನೀಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಹಿಂದೆ ನಿರೋಧ್ ಹೆಸರಿನ ಮುಂದೆ ಡೀಲಕ್ಸ್ ಹೆಸರಿತ್ತು. ಆದ್ರೀಗ ಆಶಾ ನಿರೋಧ್ ಎಂದು ಹೆಸರಿಡಲಾಗಿದೆ.

ಕಾಂಡೋಮ್ ಪಡೆದ ವ್ಯಕ್ತಿಗಳು ಆಶಾ ಕಾರ್ಯಕರ್ತೆಯರಿಗೆ 1 ರೂಪಾಯಿ ನೀಡಬೇಕು. ಆದ್ರೆ ಅವರು ಹಣವನ್ನೂ ನೀಡ್ತಾ ಇಲ್ಲ. ಈ ಹಣವನ್ನು ಆಶಾ ಕಾರ್ಯಕರ್ತೆಯರೇ ಸರ್ಕಾರಕ್ಕೆ ನೀಡಬೇಕಾಗಿದೆ. ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳದೆ ಹೋದಲ್ಲಿ ಕೇಂದ್ರದ ಮೆಟ್ಟಿಲೇರುವುದಾಗಿ ಆಶಾ ಕಾರ್ಯಕರ್ತೆಯರು ಹೇಳಿಕೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...