alex Certify
ಕನ್ನಡ ದುನಿಯಾ       Mobile App
       

Kannada Duniya

ತೆಲಂಗಾಣ ರಣಕಣದಲ್ಲಿ ಕಾಂಗ್ರೆಸ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಓವೈಸಿ

ತೀವ್ರ ಕುತೂಹಲ ಕೆರಳಿಸಿರುವ ತೆಲಂಗಾಣ ವಿಧಾನಸಭಾ ಚುನಾವಣೆಯ ಪ್ರಚಾರ ತಾರಕಕ್ಕೇರಿದ್ದು, ಕಾಂಗ್ರೆಸ್ ವಿರುದ್ಧ ಎಐಎಂಐಎಂ ಮುಖ್ಯಸ್ಥ ಓವೈಸಿ ಹೊಸ ಬಾಂಬ್ ಸಿಡಿಸಿದ್ದಾರೆ.

ಅದಿಲಾಬಾದ್ ಜಿಲ್ಲೆಯ ನಿರ್ಮಲ್ ವಿಧಾನಸಭಾ ಕ್ಷೇತ್ರದ ತನ್ನ ಸಾರ್ವಜನಿಕ ರಾಲಿಯನ್ನು ರದ್ದುಗೊಳಿಸಲು ಕಾಂಗ್ರೆಸ್ ಯತ್ನಿಸಿತ್ತು. ಇದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ನನಗೆ 25 ಲಕ್ಷ ರೂ. ಆಫರ್ ಮಾಡಿದ್ದರು ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಈ ಆರೋಪವನ್ನು ಸಾಬೀತುಗೊಳಿಸಲು ನನ್ನ ಬಳಿ ಕಾಲ್ ರೆಕಾರ್ಡ್ ಇದೆ. ಇಂತಹ ಕೆಲಸ ಮಾಡುವ ಪಕ್ಷವನ್ನು ನೀವು ಏನೆಂದು ಕರೆಯುತ್ತೀರಿ? 25 ಲಕ್ಷ….ಅದು ಅವರ ಉದ್ಧಟತನದ ಮೌಲ್ಯ.

ನನ್ನನ್ನು ಯಾರೂ ಖರೀದಿ ಮಾಡಲು ಸಾಧ್ಯವಿಲ್ಲ. ನಾನು ಜೀವವನ್ನು ತ್ಯಾಗ ಮಾಡಿಯೇನು, ಆದರೆ ಪಕ್ಷದ ಹಿತಾಸಕ್ತಿಯನ್ನು ಬಲಿ ಕೊಡುವುದಿಲ್ಲ ಎಂದು ಓವೈಸಿ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಇಂತಹ ಪ್ರಲೋಭನೆಗಳಿಗೆ ನೀವು ಬಲಿಯಾಗಬೇಡಿ ಎಂದು ಮತದಾರರಿಗೆ ಹೈದರಾಬಾದ್‌ನ ಸಂಸದ ಕರೆ ನೀಡಿದ್ದಾರೆ. ಡಿ.7 ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...