alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಜಿಯಾಬಾದ್ ನಲ್ಲಿ ಸಿಕ್ಕಿದೆ ಕಳವಾಗಿದ್ದ ಕೇಜ್ರಿವಾಲ್ ಕಾರು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಳವಾಗಿದ್ದ ಕಾರು ಗಾಜಿಯಾಬಾದ್ ನಲ್ಲಿ ಪತ್ತೆಯಾಗಿದೆ. ಅಕ್ಟೋಬರ್ 12ರಂದು ಕೇಜ್ರಿವಾಲ್ ರ ವ್ಯಾಗನಾರ್ ಕಾರನ್ನು ಯಾರೋ ಕದ್ದೊಯ್ದಿದ್ದರು. ದೆಹಲಿ ಸೆಕ್ರೆಟರಿಯೇಟ್ ನ ಗೇಟ್ ನಂ.3ರಲ್ಲಿದ್ದ ಕಾರು ನಾಪತ್ತೆಯಾಗಿತ್ತು.

ಆಮ್ ಆದ್ಮಿ ಪಕ್ಷದ ಬೆಂಬಲಿಗ ಕುಂದನ್ ಶರ್ಮಾ ಎಂಬಾತ ಈ ಕಾರನ್ನು ದಾನವಾಗಿ ನೀಡಿದ್ದರು. ತಮ್ಮ ರಾಜಕೀಯ ಪಯಣದ ಆರಂಭದಲ್ಲಿ ಕೇಜ್ರಿವಾಲ್ ಇದೇ ಕಾರನ್ನು ಬಳಸುತ್ತಿದ್ರು. ಎಎಪಿ ಹೆಸರಲ್ಲಿ ನೋಂದಣಿಯಾಗಿರೋ ಈ ಕಾರನ್ನು ಸದ್ಯ ಪಕ್ಷದ ಮೀರಿಯಾ ಸಂಯೋಜಕಿ ವಂದನಾ ಸಿಂಗ್ ಬಳಸುತ್ತಿದ್ರು.

ಸಿಎಂ ಕಾರನ್ನೇ ಕದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಎಪಿ, ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಾಲಾಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗವರ್ನರ್ ವಿಫಲರಾಗಿದ್ದಾರೆಂದು ಆರೋಪಿಸಿದೆ. ಸಿಎಂ ಕಾರನ್ನೇ ಕದಿಯುತ್ತಾರೆ ಅಂದ್ಮೇಲೆ ಜನಸಾಮಾನ್ಯರ ಪಾಡೇನು ಅಂತಾ ಪ್ರಶ್ನಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...