alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಕಷ್ಟಕ್ಕೆ ಸಿಲುಕಿದ ಮತ್ತೊಬ್ಬ ಆಪ್ ಶಾಸಕ

aap-mla-fake-degreeದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಕೆಲ ಶಾಸಕರು ವಿವಿಧ ಪ್ರಕರಣಗಳಡಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮಧ್ಯೆ ಈಗ ಮತ್ತೊಬ್ಬ ಆಪ್ ಶಾಸಕರ ವಿರುದ್ದ ನಕಲಿ ಪದವಿ ಪತ್ರ ನೀಡಿ ಶಿಕ್ಷಕ ಕೆಲಸ ಗಿಟ್ಟಿಸಲು ಯತ್ನಿಸಿದ್ದ ಆರೋಪ ಕೇಳಿ ಬಂದಿದೆ.

ದೆಹಲಿ ಕಂಟೋನ್ಮೆಂಟ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಿಜೆಪಿಯ ಮಾಜಿ ಶಾಸಕ ಕರಣ್ ಸಿಂಗ್ ತನ್ವರ್ ಈ ಆರೋಪ ಮಾಡಿದ್ದು, ಆಮ್ ಆದ್ಮಿ ಶಾಸಕ ಸುರೇಂದ್ರ ಸಿಂಗ್, ಸೇನೆಯಿಂದ ನಿವೃತ್ತರಾದ ಬಳಿಕ ನಕಲಿ ಪದವಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ನೌಕರಿ ಪಡೆಯಲು ಯತ್ನಿಸಿದ್ದರೆಂದು ಹೇಳಿದ್ದಾರೆ.

ಸುರೇಂದ್ರ ಸಿಂಗ್ ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದ ಸಿಕ್ಕಿಂ ವಿಶ್ವವಿದ್ಯಾನಿಲಯದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ತಾವು ಮಾಹಿತಿ ಪಡೆದುಕೊಂಡಿದ್ದು, ಈ ಹೆಸರಿನ ವಿದ್ಯಾರ್ಥಿ ತಮ್ಮಲ್ಲಿ ವ್ಯಾಸಂಗ ಮಾಡಿರುವ ದಾಖಲೆಗಳಿಲ್ಲವೆಂದು ತಿಳಿಸಿದೆ ಎಂದಿದ್ದಾರೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ಸುರೇಂದ್ರ ಸಿಂಗ್, ಕರಣ್ ಸಿಂಗ್ ತನ್ವರ್ ಯಾವುದೋ ಬೇರೆ ವಿಶ್ವವಿದ್ಯಾನಿಲಯದಿಂದ ಪಡೆದಿರುವ ಮಾಹಿತಿಯನ್ನು ತೋರಿಸುತ್ತಿದ್ದಾರೆ. ಹತ್ಯೆ ಆರೋಪದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿರುವ ಕಾರಣ ಕರಣ್ ಸಿಂಗ್ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆಂದು ಸುರೇಂದ್ರ ಸಿಂಗ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...