alex Certify
ಕನ್ನಡ ದುನಿಯಾ       Mobile App
       

Kannada Duniya

ಸಮೀಕ್ಷೆ ಬಿಚ್ಚಿಟ್ಟ ರಹಸ್ಯ: ಪಂಜಾಬ್ ಚುಕ್ಕಾಣಿ ಹಿಡಿಯಲಿದೆ ಆಮ್ ಆದ್ಮಿ

474716-arvind-kejriwal-700-2

ಪಂಜಾಬ್ ನಲ್ಲಿ ಸದ್ಯದಲ್ಲಿಯೇ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಲು ರಾಜಕೀಯ ಪಕ್ಷಗಳು ಸಾಕಷ್ಟು ಕಸರತ್ತು ನಡೆಸುತ್ತಿದ್ದು, ಈ ನಡುವೆ ಆಮ್ ಆದ್ಮಿ ಪಾರ್ಟಿ ಬರೋಬ್ಬರಿ ನೂರು ಸ್ಥಾನಗಳಲ್ಲಿ ವಿಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಹೌದು. ಹಫಿಂಗ್ ಸ್ಟನ್‌ ಪೋಸ್ಟ್‌ ಹಾಗೂ ಸಿ ಓಟರ್‌ ಜಂಟಿಯಾಗಿ ಈ ಸಮೀಕ್ಷೆ ನಡೆಸಿದ್ದು, 2015 ರ ಫೆಬ್ರವರಿಯಿಂದ ತೊಡಗಿ 2016 ರ ಫೆಬ್ರವರಿವರೆಗಿನ ಅವಧಿಯಲ್ಲಿ ಪಂಜಾಬ್‌ ನಲ್ಲಿ ಆಮ್‌ ಆದ್ಮಿ ಪಕ್ಷದ ಮೇಲೆ ಮತದಾರರಿಗೆ ಒಲವು ಹೆಚ್ಚುತ್ತಿದ್ದು, ಹಾಗಾಗಿ ಪಂಜಾಬ್‌ ನ 117 ಸದಸ್ಯ ಬಲದ ಸದನದಲ್ಲಿ 94 ರಿಂದ 100 ಸ್ಥಾನಗಳು ಆಮ್ ಆದ್ಮಿಯ ಪಾಲಾಗಲಿವೆ ಎಂದು ಸಮೀಕ್ಷೆ ವಿವರಿಸಿದೆ.

ಅಲ್ಲದೇ ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 8 ರಿಂದ 14 ಸ್ಥಾನಗಳನ್ನು ಪಡೆಯಲು ಯಶಸ್ವಿಯಾದರೆ, ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿ ಕೂಟಕ್ಕೆ ಕೇವಲ 6 ರಿಂದ 12 ಸ್ಥಾನಗಳಷ್ಟೇ ಲಭಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...