alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಜ್ರಿವಾಲ್ ಪಂಜಾಬ್ ನಲ್ಲಿ ಎಎಪಿಯ ಸಿಎಂ ಅಭ್ಯರ್ಥಿ!

kejriwal759

ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಭರದ ಪ್ರಚಾರದಲ್ಲಿ ತೊಡಗಿರುವ ಆಮ್ ಆದ್ಮಿ ಪಕ್ಷ, ಅರವಿಂದ್ ಕೇಜ್ರಿವಾಲ್ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಂತಾ ಘೋಷಿಸಿದೆ.

ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ವಿಷಯ ತಿಳಿಸಿದ್ದಾರೆ. ಮೊಹಾಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಿಸೋಡಿಯಾ, ಪಂಜಾಬ್ ನಲ್ಲಿ ಕೇಜ್ರಿವಾಲ್ ಅವರೇ ಸಿಎಂ ಅಭ್ಯರ್ಥಿ ಎಂದ್ರು.

ಆಪ್ ನ ಯಾರೇ ಮುಖ್ಯಮಂತ್ರಿಯಾದ್ರೂ ಕೇಜ್ರಿವಾಲ್ ಅವರೇ ಸಿಎಂ ಎಂದರ್ಥ ಅಂತಾ ಮಾರ್ಮಿಕವಾಗಿ ನುಡಿದ್ರು. ಕೇಜ್ರಿವಾಲ್ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಬಿಂಬಿಸುತ್ತಿರುವ ಎಎಪಿ ನಡೆಯನ್ನು ವಿಪಕ್ಷಗಳು ಟೀಕಿಸಿವೆ.

ಹತಾಶೆಯಿಂದ ಕೇಜ್ರಿವಾಲ್ ದೆಹಲಿ ಬಿಟ್ಟು ಪಲಾಯನ ಮಾಡಲು ಮುಂದಾಗಿದ್ದಾರೆ, ಇದರಿಂದ ದೆಹಲಿ ಜನತೆಗೆ ಮೋಸ ಮಾಡಿದಂತಾಗುವುದಿಲ್ಲವೇ ಅಂತಾ ವಿಜೇಂದ್ರ ಗುಪ್ತಾ ಪ್ರಶ್ನಿಸಿದ್ದಾರೆ. ಪಂಜಾಬ್ ಗೂ ಕೇಜ್ರಿವಾಲ್ ಅವರೇ ಸಿಎಂ ಎಂದರೆ ಅದರರ್ಥ ಅವರು ದೆಹಲಿಯಲ್ಲಿ ಕುಳಿತು ಪಂಜಾಬ್ ನಲ್ಲೂ ಆಡಳಿತ ಮಾಡುತ್ತಾರೆ ಎಂದಾಯ್ತು ಅಂತಾ ವ್ಯಂಗ್ಯವಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...