alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಗಳಿಗೆ ರಜೆ ನೀಡಲು ಸಿ.ಎಂ. ಸೂಚನೆ

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಡೇಂಜರಸ್ ಹೊಗೆ ಆವರಿಸಿರುವುದರಿಂದ ಕೆಲವು ದಿನಗಳ ಕಾಲ ಶಾಲೆಗಳಿಗೆ ರಜೆ ನೀಡುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೂಚನೆ ನೀಡಿದ್ದಾರೆ.

ದೆಹಲಿಯ ಏರ್ ಕ್ವಾಲಿಟಿ ಇಂಡೆಕ್ಸ್ ಮಾಹಿತಿಯಂತೆ ಗಾಳಿಯಲ್ಲಿ ವಿಷಕಾರಿ ಕಣಗಳು ಹೆಚ್ಚಾಗಿವೆ. ದೆಹಲಿಯ ಪ್ರದೇಶದಲ್ಲಿ ಇದು ಅಪಾಯಕಾರಿ ಮಟ್ಟದಲ್ಲಿದ್ದು, ಕೆಲವು ದಿನಗಳ ಕಾಲ ರಜೆ ನೀಡುವಂತೆ ಶಿಕ್ಷಣ ಖಾತೆ ಸಚಿವ ಮನೀಶ್ ಸಿಸೊಡಿಯಾ ಅವರಿಗೆ ಸೂಚಿಸಿದ್ದಾರೆ.

ಸಾಮಾನ್ಯವಾಗಿ ಈ ದಿನಗಳಲ್ಲಿ ಪ್ರತಿವರ್ಷ ಮಾಲಿನ್ಯ ಹೆಚ್ಚಾಗುತ್ತದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ವಿಶ್ವದ ಅತಿಹೆಚ್ಚು ಮಾಲಿನ್ಯಕಾರಕ ರಾಜಧಾನಿ ನಗರವಾಗಿರುವ ದೆಹಲಿಯಲ್ಲಿ ಪ್ರಸ್ತುತ ಅಪಾಯಕಾರಿ ಹೊಗೆ ಆವರಿಸಿರುವುದರಿಂದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ವೈದ್ಯಕೀಯ ಸಂಸ್ಥೆಗಳು ಅಪಾಯದ ಎಚ್ಚರಿಕೆಯನ್ನು ನೀಡಿವೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಕೆಲವು ದಿನಗಳ ಕಾಲ ಶಾಲೆಗಳಿಗೆ ರಜೆ ನೀಡುವಂತೆ ಸೂಚಿಸಿದ್ದಾರೆ.

ಮಾಲಿನ್ಯದ ಕಾರಣಕ್ಕೆ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಅನೇಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ವಿಷಕಾರಿ ಹೊಗೆಯಿಂದ ಅನೇಕ ಪ್ರದೇಶಗಳಲ್ಲಿ ಕಣ್ಣು, ಮೂಗು, ಗಂಟಲುಗಳ ತೊಂದರೆ ಕಾಣಿಸಿಕೊಂಡಿದೆ.

ದೆಹಲಿ ಅಪಾಯಕಾರಿ ಹೊಗೆ ಪ್ರಮಾಣ ಎಷ್ಟಿದೆ ಎಂದರೆ ದಿನಕ್ಕೆ 50 ಸಿಗರೇಟ್ ಸೇದುವಷ್ಟು ಸಮನಾಗಿದೆ ಎಂದು ಗಂಗಾರಾಮ್ ಆಸ್ಪತ್ರೆಯ ವೈದ್ಯ ಅರವಿಂದ್ ಕುಮಾರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...