alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಗೀತೆ ಜೊತೆಗೆ ದೆಹಲಿ ಸಿಎಂ ಹಾಡಿದ್ದಾರೆ ಈ ಹಾಡು

ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಶುಭಾಶಯಗಳನ್ನು ಕೋರಿದ್ದಾರೆ. ದೆಹಲಿಯ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅರವಿಂದ್ ಸಭೆಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಹಮ್ಹೋಂಗೇ ಕಾಮಿಯಾಬ್ ಗೀತೆಯನ್ನ ಹಾಡಿ ಸಭಿಕರ ಗಮನ ಸೆಳೆದಿದ್ದಾರೆ.

ಸಾರ್ವಜನಿಕ ಸಮಾರಂಭದಲ್ಲಿ ಅರವಿಂದ್ ಕೇಜ್ರಿವಾಲ್ ಹಾಡ್ತಿರೋದು ಇದು ಮೊದಲೇನಲ್ಲ. 2013 ರಲ್ಲಿ ದೆಹಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲೂ ದೆಹಲಿ ಸಿಎಂ ಪೈಗಮ್ ಚಿತ್ರದ ಗೀತೆಯನ್ನು ಹಾಡಿದ್ದರು. ಎರಡು ವರ್ಷಗಳ ಹಿಂದೆ ಕಿಶೋರ್ ಕುಮಾರ್ ಹಾಡಿರುವ ಎರಡು ಚಿತ್ರಗೀತೆಗಳನ್ನ ಕೇಜ್ರಿವಾಲ್ ಹಾಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕೇಜ್ರಿವಾಲ್ ಹಮ್ ಹೋಂಗೇ ಕಾಮಿಯಾಬ್ ಹಾಡಿನ ವಿಡಿಯೋವನ್ನ ಆಪ್ ಪಕ್ಷದ ಮುಖಂಡ ಕುಮಾರ್ ಬಿಸ್ವಾಸ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಾರೇ ಜಹಾಂಸೇ ಅಚ್ಚಾ ಗೀತೆಯ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಕೇಜ್ರಿವಾಲ್ ಜನರಿಗೆ ಸ್ವಾತಂತ್ರ್ಯದ ಶುಭ ಕಾಮನೆಗಳನ್ನು ಕೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...