alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಿನ ಮೂಲಕ ಕೇಜ್ರಿವಾಲ್ ಗೆ ಬರ್ತ್ ಡೇ ಗಿಫ್ಟ್ ನೀಡಿದ ಕಪಿಲ್ ಮಿಶ್ರಾ

kapil-mishra-620x400

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗಸ್ಟ್ 16ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಆಮ್ ಆದ್ಮಿ ಪಕ್ಷದಿಂದ ಹೊರ ಬಿದ್ದಿರುವ ಕಪಿಲ್ ಮಿಶ್ರಾ, ಕೇಜ್ರಿವಾಲ್ ಗೆ ಹುಟ್ಟುಹಬ್ಬದಂದು ಉಡುಗೊರೆ ನೀಡಿದ್ದಾರೆ. ಕೇಜ್ರಿವಾಲ್ ಗಾಗಿ ಒಂದು ಹಾಡು ರಚಿಸಿದ್ದಾರೆ ಕಪಿಲ್ ಮಿಶ್ರಾ.

ಮೂರು ಗಂಟೆಗೆ ಕೇಜ್ರಿವಾಲ್ ಗೆ ಗಿಫ್ಟ್ ನೀಡುವುದಾಗಿ ಮಿಶ್ರಾ ಟ್ವಿಟ್ ಮಾಡಿದ್ದರು. ಸರಿಯಾಗಿ ಮೂರು ಗಂಟೆಗೆ ಟ್ವೀಟರ್ ಹಾಗೂ ಫೇಸ್ಬುಕ್ ನಲ್ಲಿ ಹಾಡನ್ನು ಟ್ವಿಟ್ ಮಾಡಿದ್ದಾರೆ ಮಿಶ್ರಾ. ಹಾಡಿನಲ್ಲಿ ಕಪಿಲ್ ಮಿಶ್ರಾ ಜೊತೆ ಇನ್ನೂ ಕೆಲ ಜನರಿದ್ದಾರೆ. ಬೆವರಿನಲ್ಲಿ ತೊಯ್ದು ಹೋಗಿದ್ದಾರೆ ಮಿಶ್ರಾ. 2.36 ನಿಮಿಷದ ಹಾಡನ್ನು ಮಿಶ್ರಾ ತಾವೇ ಹಾಡಿದ್ದಾರೆ.

ಏಕ್ ತೇರಿ ಕುರ್ಚಿ ಗೋಲ್ ಹೆಸರಿನಲ್ಲಿ ಈ ಹಾಡನ್ನು ಬರೆದಿದ್ದಾರೆ ಮಿಶ್ರಾ. ಭಾರತವೊಂದೇ ಅಲ್ಲ ಪಾಕಿಸ್ತಾನದಲ್ಲೂ ಈ ಸಾಂಗ್ ವೈರಲ್ ಆಗಿದ್ದು ಈಗಾಗಲೇ 33 ಸಾವಿರಕ್ಕೂ ಹೆಚ್ಚು ಮಂದಿ ನೋಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...