alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯದಲ್ಲೇ ತೆರೆಗೆ ಬರ್ತಿದೆ ಕೇಜ್ರಿವಾಲ್ ಬಯೋಪಿಕ್

ಸರ್ಕಾರಿ ಕೆಲಸ ಬಿಟ್ಟು ಸಾಮಾಜಿಕ ಕಾರ್ಯಕರ್ತರಾಗಿ ನಂತರ ರಾಜಕೀಯ ಅಖಾಡಕ್ಕೆ ಧುಮುಕಿದವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್. ಆಮ್ ಆದ್ಮಿ ನಾಯಕ ಕೇಜ್ರಿವಾಲ್ ಬದುಕು ಆಧಾರಿತ ಡಾಕ್ಯುಮೆಂಟರಿ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಕೇಜ್ರಿವಾಲ್ ಬಯೋಪಿಕ್ ಗೆ ‘An Insignificant Man’ ಅಂತಾ ಹೆಸರಿಡಲಾಗಿದೆ. ವೈಸ್ ಸಂಸ್ಥೆ ಇದರ ಹಕ್ಕುಗಳನ್ನು ಪಡೆದುಕೊಂಡಿದ್ದು, ನವೆಂಬರ್ 17ರಂದು ಜಗತ್ತಿನಾದ್ಯಂತ ಬಯೋಪಿಕ್ ರಿಲೀಸ್ ಆಗಲಿದೆ. ಆನಂದ್ ಗಾಂಧಿ ಬಯೋಪಿಕ್ ನ ನಿರ್ಮಾಪಕರು.

ಖುಷ್ಬೂ ರಂಕಾ ಹಾಗೂ ವೀಣಾ ಶುಕ್ಲಾ ಈ ಬಯೋಪಿಕ್ ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ನಾನ್ ಫಿಕ್ಷನ್ ಪೊಲಿಟಿಕಲ್ ಥ್ರಿಲ್ಲರ್. ಕೇಜ್ರಿವಾಲ್ ಬಯೋಪಿಕ್ ಗೆ ಪ್ರಧಾನಿ ಮೋದಿ ಮತ್ತು ಇತರ ರಾಜಕಾರಣಿಗಳಿಂದ ಅನುಮತಿ ಪಡೆಯುವಂತೆ ಸೆನ್ಸಾರ್ ಬೋರ್ಡ್ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಸೂಚಿಸಿದ್ದು ವಿವಾದಕ್ಕೂ ಕಾರಣವಾಗಿತ್ತು.

22 ದೇಶಗಳ ಥಿಯೇಟರ್ ಮತ್ತು ಟಿವಿಗಳಲ್ಲಿ ಕೇಜ್ರಿವಾಲ್ ಸಿನೆಮಾ ಪ್ರಸಾರವಾಗಲಿದೆ. 90 ನಿಮಿಷಗಳ ಈ ಚಿತ್ರ ಅತ್ಯಂತ ವಾಸ್ತವಿಕವಾಗಿದೆ ಅಂತಾ ನಿರ್ದೇಶಕರು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...