alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಜ್ರಿವಾಲ್ ಗೆ ಕಪಿಲ್ ಮಿಶ್ರಾ ತಾಯಿಯ ಬಹಿರಂಗ ಪತ್ರ

annapoorna-mishra_650ದೆಹಲಿ ಸರ್ಕಾರದಲ್ಲಿ ಸಚಿವರಾಗಿದ್ದ ಕಪಿಲ್ ಮಿಶ್ರಾರನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪುಟದಿಂದ ಕೈ ಬಿಟ್ಟ ಬಳಿಕ ತಿರುಗಿ ಬಿದ್ದಿರುವ ಕಪಿಲ್ ಮಿಶ್ರಾ, ಕೇಜ್ರಿವಾಲ್ ವಿರುದ್ದ ಹಲವು ಗುರುತರ ಆರೋಪಗಳನ್ನು ಮಾಡಿದ್ದರು. ತಮ್ಮ ಕಣ್ಣೆದುರಲ್ಲೇ ಕೇಜ್ರಿವಾಲ್ ಕೋಟ್ಯಾಂತರ ರೂ. ಲಂಚ ಸ್ವೀಕರಿಸಿದ್ದರೆಂದು ಆರೋಪಿಸಿದ್ದರು.

ಇದಾದ ಬಳಿಕ ಕಪಿಲ್ ಶರ್ಮಾರನ್ನು ಆಮ್ ಆದ್ಮಿ ಪಾರ್ಟಿಯಿಂದ ಉಚ್ಚಾಟನೆ ಮಾಡಿದ್ದು, ಕಪಿಲ್ ಮಿಶ್ರಾ ಕಳೆದ ಮೂರು ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಈ ಮಧ್ಯೆ ಕಪಿಲ್ ಶರ್ಮಾ ಅವರ ತಾಯಿ, ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ನ ಮಾಜಿ ಮೇಯರ್ ಅನ್ನಪೂರ್ಣ ಮಿಶ್ರಾ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಬಹಿರಂಗ ಪತ್ರ ಬರೆದಿದ್ದಾರೆ.

ತಮ್ಮ ಪತ್ರದಲ್ಲಿ ಕೇಜ್ರಿವಾಲ್ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿರುವ ಅನ್ನಪೂರ್ಣ ಮಿಶ್ರಾ, ದೇವರಿಗೆ ಭಯಪಡಿ ಎಂದಿದ್ದಾರೆ. ಮೂರು ದಿನಗಳಿಂದ ತಮ್ಮ ಪುತ್ರ ಯಾವುದೇ ಆಹಾರ ಸೇವಿಸಿಲ್ಲ. ಆತನ ಪ್ರಶ್ನೆಗಳಿಗೆ ಉತ್ತರಿಸಬೇಕಾದ್ದು ನಿಮ್ಮ ಕರ್ತವ್ಯ ಎಂದಿದ್ದಾರೆ. ರಾಜಕೀಯ ಗೊಡವೆಗೆ ಹೋಗದಿದ್ದ ತಮ್ಮ ಪುತ್ರನನ್ನು ನೀವೇ ನಮ್ಮ ಮನೆಗೆ ಬಂದು ಮನವೊಲಿಸಿ ಕರೆದುಕೊಂಡು ಹೋಗಿದ್ದೀರಿ ಎಂಬುದನ್ನು ನೆನಪಿಸಿರುವ ಅನ್ನಪೂರ್ಣ ಮಿಶ್ರಾ, ಸುಳ್ಳು ಹೇಳುವುದನ್ನು ಮೊದಲು ನಿಲ್ಲಿಸಿ ಎಂದು ಕೇಜ್ರಿವಾಲ್ ಗೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...