alex Certify
ಕನ್ನಡ ದುನಿಯಾ       Mobile App
       

Kannada Duniya

ಅರುಣಾಚಲದ ಈ ಗ್ರಾಮದಲ್ಲಿರುವವರೆಲ್ಲರೂ ಕೋಟ್ಯಾಧಿಪತಿಗಳು…!

ಅರುಣಾಚಲ ಪ್ರದೇಶದ ಗ್ರಾಮವೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣವಾಗಿರುವುದು ಆ ಗ್ರಾಮದ ಜನತೆಯ ಶ್ರೀಮಂತಿಕೆ. ಈ ಗ್ರಾಮವನ್ನು ಸದ್ಯಕ್ಕೆ ಭಾರತ ಮಾತ್ರವಲ್ಲ ಏಷ್ಯಾದ ಶ್ರೀಮಂತ ಗ್ರಾಮವೆಂದರೂ ತಪ್ಪಾಗಲಾರದು.

ಅರುಣಾಚಲ ಪ್ರದೇಶದ ಬೋಮ್ಜಾ ಗ್ರಾಮದಲ್ಲಿ ಒಟ್ಟು 31 ಕುಟುಂಬಗಳಿದ್ದು, ಈಗ ಎಲ್ಲರೂ ಕೋಟ್ಯಾಧಿಪತಿಗಳಾಗಿದ್ದಾರೆ. ರಕ್ಷಣಾ ಇಲಾಖೆ ಈ ಗ್ರಾಮದ ಬಳಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ಗ್ರಾಮದ 200.05 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ.

ಪರಿಹಾರವಾಗಿ 40,80,38,400 ರೂ.ಗಳನ್ನು ಗ್ರಾಮಸ್ಥರಿಗೆ ನೀಡಲಾಗಿದ್ದು, ಹೀಗಾಗಿ ಗ್ರಾಮಸ್ಥರೆಲ್ಲರೂ ಕೋಟ್ಯಾಧಿಪತಿಗಳಾಗಿದ್ದಾರೆ. ಒಬ್ಬರಿಗೆ 2.44 ಕೋಟಿ ರೂ. ಸಿಕ್ಕಿದ್ದರೆ, ಮತ್ತೊಬ್ಬರಿಗೆ 6.73 ಕೋಟಿ ರೂ. ಪರಿಹಾರ ಸಿಕ್ಕಿದೆ. ಹೀಗೆ ಬಹುತೇಕ ಎಲ್ಲರಿಗೂ ಕೋಟಿ ರೂ. ಮೇಲ್ಪಟ್ಟು ಪರಿಹಾರ ಸಿಕ್ಕಿದ್ದು, ಅರುಣಾಚಲ ಮುಖ್ಯಮಂತ್ರಿ ಪೇಮಾ ಖಂಡು ಸೋಮವಾರದಂದು ಪರಿಹಾರದ ಚೆಕ್ ವಿತರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...