alex Certify
ಕನ್ನಡ ದುನಿಯಾ       Mobile App
       

Kannada Duniya

ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದವಳು ಸಿಕ್ಕಿದ್ದೆಲ್ಲಿ ಗೊತ್ತಾ?

ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವತಿಯೊಬ್ಬಳನ್ನು ಪೊಲೀಸರು ನೊಯ್ಡಾದಲ್ಲಿ ಪತ್ತೆ ಮಾಡಿದ್ದಾರೆ. ಲೋಹಿತ್ ಜಿಲ್ಲೆಯ ಜೆಂಟಿ ಬೆಲೈ ಎಂಬಾಕೆಗೆ ಫೇಸ್ಬುಕ್ ನಲ್ಲಿ ಅಹ್ತರ್ ಹಸನ್ ಎಂಬಾತನ ಪರಿಚಯವಾಗಿತ್ತು. ದೆಹಲಿಯಲ್ಲಿ ಕೆಲಸ ಕೊಡಿಸೋದಾಗಿ ಆತ ಜೆಂಟಿಗೆ ಭರವಸೆ ನೀಡಿದ್ದ.

ಅದನ್ನು ನಂಬಿದ ಯುವತಿ ಹೆತ್ತವರಿಗೆ ತಿಳಿಸದೇ ದೆಹಲಿಗೆ ಹೊರಟುಬಿಟ್ಟಿದ್ಲು. ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಫೇಸ್ಬುಕ್ ಸಹ ಆ್ಯಕ್ಟಿವ್ ಆಗಿರಲಿಲ್ಲ. ಕೂಡಲೇ ಈ ಬಗ್ಗೆ ಜೆಂಟಿ ಹೆತ್ತವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ರು.

ಕೊನೆಗೂ ಯುವತಿ ನೊಯ್ಡಾದಲ್ಲಿ ಸಿಕ್ಕಿದ್ದಾಳೆ. ಕೆಲಸದ ಆಮಿಷವೊಡ್ಡಿ ಯುವತಿಯರನ್ನು ಯಾಮಾರಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸಾಮಾಜಿಕ ತಾಣಗಳಲ್ಲಿ ಅಪರಿಚಿತರೊಂದಿಗೆ ಸ್ನೇಹ ಮಾಡುವ ಮುನ್ನ ಎಚ್ಚರಿಕೆಯಿಂದಿರುವಂತೆ ಪೊಲೀಸರು ಸೂಚಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...