alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಜ್ರಿ ವಿರುದ್ಧ ಮತ್ತೊಂದು ಮೊಕದ್ದಮೆ ಹೂಡಿದ ಜೇಟ್ಲಿ

443891-jaitley-kejri700

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತೊಂದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಜೇಟ್ಲಿ ಅವರನ್ನು ಕೇಜ್ರಿವಾಲ್ ಪರ ವಕೀಲರಾದ ರಾಮ್ ಜೇಠ್ಮಲಾನಿ ಕೋರ್ಟ್ ನಲ್ಲೇ ವಂಚಕ ಅಂತಾ ಕರೆದಿದ್ದರು. ಈ ಹಿನ್ನೆಲೆಯಲ್ಲಿ 10 ಕೋಟಿ ರೂಪಾಯಿ ಪರಿಹಾರ ಕೋರಿ ಜೇಟ್ಲಿ ಕೇಸ್ ದಾಖಲಿಸಿದ್ದಾರೆ.

ಈಗಾಗ್ಲೇ ಕೇಜ್ರಿವಾಲ್ ಮತ್ತು ಐವರು ಆಪ್ ಮುಖಂಡರ ವಿರುದ್ಧ ಜೇಟ್ಲಿ ದಾಖಲಿಸಿರುವ ಮಾನನಷ್ಟ ಪ್ರಕರಣದ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ಕಳೆದ ವಾರ ವಿಚಾರಣೆ ಸಂದರ್ಭದಲ್ಲಿ ಸಚಿವರನ್ನು ಪ್ರಶ್ನಿಸುವ ಭರದಲ್ಲಿ ಜೇಠ್ಮಲಾನಿ ವಂಚಕ ಅಂತಾ ಕರೆದಿದ್ದಾರೆ. ಈಗ ಜೇಟ್ಲಿ ದಾಖಲಿಸಿರುವ ಪ್ರಕರಣ ನಾಳೆ ದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಜೇಟ್ಲಿ ಒಬ್ಬ ವಂಚಕ ಅದನ್ನು ನಾನು ಸಾಬೀತುಪಡಿಸುತ್ತೇನೆ ಅಂತಾ ಜೇಠ್ಮಲಾನಿ ಕೋರ್ಟ್ ನಲ್ಲಿ ಸವಾಲು ಹಾಕಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೇಟ್ಲಿ, ಇಂತಹ ಪದ ಬಳಕೆಗೆ ಅವಕಾಶವಿದೆಯೇ? ಇದಕ್ಕೆ ನಿಮ್ಮ ಕ್ಲೈಂಟ್ ಕೇಜ್ರಿವಾಲ್ ಸಮ್ಮತಿ ಇದೆಯೇ ಅಂತಾ ಕೇಳಿದ್ದರು. ಅದಕ್ಕೆ ಉತ್ತರಿಸಿದ ಜೇಟ್ಲಿ ತಮ್ಮ ಕ್ಲೈಂಟ್ ಒಪ್ಪಿಗೆ ಮೇರೆಗೆ ಆ ಪದ ಬಳಸಿದ್ದಾಗಿ ಹೇಳಿದ್ದರು. 93 ವರ್ಷದ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರನ್ನು ವಕೀಲರಾಗಿ ನೇಮಿಸಿಕೊಂಡಿದ್ದ ಎಎಪಿ ಅವರಿಗೆ 4 ಕೋಟಿ ರೂಪಾಯಿ ಶುಲ್ಕ ನೀಡಲು ಮುಂದಾಗಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...